Thursday, June 18, 2026
spot_imgspot_img
spot_imgspot_img

ಮಂಗಳೂರು: ಎಂಡಿಎಂಎ ಮಾದಕ ವಸ್ತು ಮಾರಾಟ; ಮೂವರ ಬಂಧನ

- Advertisement -
- Advertisement -

ಮಂಗಳೂರು: ಉಳ್ಳಾಲ ತಾಲೂಕಿನ ತಲಪಾಡಿ ಬಳಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ, 10 ಲಕ್ಷ ರೂ. ಮೌಲ್ಯದ 200 ಗ್ರಾಂ ಎಂಡಿಎಂಎ ಮಾದಕವಸ್ತು ಸೇರಿ 15 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಮೊಹಮ್ಮದ್ ಹಫೀಝ್ (35), ಅಮೀರ್ (34), ಜಾಕೀರ್ ಹುಸೇನ್(28) ಬಂಧಿತ ಆರೋಪಿಗಳು.

ಮೊಹಮ್ಮದ್ ಹಫೀಝ್, ಕೊಲೆ, ದರೋಡೆ, ಕಳ್ಳತನ ಸೇರಿ ಎಂಟು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳನ್ನು ಪ್ರಕರಣ ದಾಖಲಾಗಿದೆ. ಎಂಡಿಎಂಎ ಮಾರಾಟ ಜಾಲದ ಹಿಂದೆ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಡ್ರಗ್ ಪೆಡ್ಲರ್ಸ್ ಪತ್ತೆಗೆ ಸಿಸಿಬಿ ಮುಂದಾಗಿದೆ.

Insta: glacharyajewellers
Fb: glacharya

- Advertisement -

Related news

error: Content is protected !!