Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ: ತಡರಾತ್ರಿ ಹಿಂದೂ ಯುವತಿಗೆ ಡ್ರಾಪ್‌ ಕೊಟ್ಟ ಮುಸ್ಲಿಂ ಆಟೋ ಚಾಲಕ; ತಂಡದಿಂದ ಮಾರಣಾಂತಿಕ ಹಲ್ಲೆ

- Advertisement -
- Advertisement -
vtv vitla

ಬೆಳ್ತಂಗಡಿ: ಆಟೋದಲ್ಲಿ ಹಿಂದೂ ಯುವತಿಯನ್ನು ಕೂರಿಸಿಕೊಂಡು ಬಾಡಿಗೆಗೆ ಹೋಗಿದ್ದ ಉಜಿರೆಯ ಆಟೋ ರಿಕ್ಷಾ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.

ಉಜಿರೆ ಹಳೆಪೇಟೆ ನಿವಾಸಿ ಮುಹಮ್ಮದ್ ಆಶಿಕ್ (22) ಹಲ್ಲೆಗೊಳಗಾದ ಯುವಕ.

ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಬೆಂಗಳೂರಿನ ನಿವಾಸಿ ಊರಿಗೆ ಲಗೇಜ್ ಜೊತೆ ತೆರಳಲು ಉಜಿರೆ ದ್ವಾರದ ಎದುರು ನಿಂತು ಪರಿಚಯಸ್ಕ ಮುಸ್ಲಿಂ ಆಟೋ ಚಾಲಕನಿಗೆ ಕರೆ ಮಾಡಿದ್ದು ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಆ.2 ರಂದು ರಾತ್ರಿ ಸುಮಾರು 9 ಗಂಟೆಗೆ ಡ್ರಾಪ್ ಮಾಡಿ ಹೊರಡುವಾಗ ಅಪರಿಚಿತ ಯುವಕರ ತಂಡ ನಿನಗೆ ಹಿಂದೂ ಯುವತಿಯರೆ ಬೇಕಾ ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಸದ್ಯ ಯುವಕಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!