Monday, June 15, 2026
spot_imgspot_img
spot_imgspot_img

ನವಜಾತ ಶಿಶುವನ್ನು ಹೊಲದಲ್ಲಿ ಎಸೆದು ಪರಾರಿಯಾಗಲು ಯತ್ನಿಸಿದ ಬಾಣಂತಿ ಮತ್ತು ಪೋಷಕರು

- Advertisement -
- Advertisement -

ಹೊಲದಲ್ಲಿ ನವಜಾತ ಗಂಡು ಶಿಶುವನ್ನು ಎಸೆದು ಪರಾರಿಯಾಗಲು ಯತ್ನಿಸಿದ ಬಾಣಂತಿ ಮತ್ತು ಆಕೆಯ ಸಹೋದರನನ್ನು ಸ್ಥಳೀಯರು ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಬಳಿ ನಡೆದಿದೆ.

ಅಕ್ರಮ ಸಂಬಂಧದಿಂದ ಮಹಿಳೆ ಗರ್ಭಿಣಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸಂಗೊಂದಿ ಗ್ರಾಮದ ಬಾಣಂತಿ ಹಾಗೂ ಆಕೆಯ ಸಹೋದರ ಬೆನಕಟ್ಟಿ ಗ್ರಾಮದ ಬಳಿ ಇರುವ ಹೊಲಕ್ಕೆ ಬಂದು ನವಜಾತ ಗಂಡು ಶಿಶುವನ್ನು ಎಸೆದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಇದನ್ನು ನೋಡಿದ ಸ್ಥಳೀಯರು, ಬಾಣಂತಿ ಮತ್ತು ಪೋಷಕರನ್ನು ತಾರಾಟೆಗೆ ತೆಗೆದುಕೊಂಡಿದ್ದು, ಆಕೆಯ ಸಹೋದರನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದು, ನಂತರ ಬಾಣಂತಿ ಹಾಗೂ ನವಜಾತ ಶಿಶುವನ್ನು ಆ್ಯಂಬುಲೆನ್ಸ್​​ ಮೂಲಕ ಜಿಲ್ಲಾಸ್ಪತ್ರೆಗೆ ಕೊಂಡೊಯ್ದಿದ್ದಾರೆ.

- Advertisement -

Related news

error: Content is protected !!