Tuesday, June 23, 2026
spot_imgspot_img
spot_imgspot_img

ಬೆಳ್ತಂಗಡಿ ತಾಲೂಕು ದಾಟಿ ಸುಳ್ಯಕ್ಕೂ ಹಬ್ಬಿದ ಸೌಜನ್ಯ ಪರ ಕಿಚ್ಚು.

- Advertisement -
- Advertisement -

ಕಾಲ್ನಡಿಗೆ, ವಾಹನ ಜಾಥ, ಬೃಹತ್ ಸಭೆಯಲ್ಲಿ ಹರಿದು ಬಂದ ಜನಸಾಗರ

ದೇಶಾದ್ಯಂತ ಬೆಚ್ಚಿ ಬೀಳಿಸಿದ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರ ನಡೆದ ಬೃಹತ್ ಸಮಾವೇಶದ ಬೆನ್ನಲ್ಲೇ ಬೃಹತ್ ಹೋರಾಟಕ್ಕೆ ಸುಳ್ಯ ಸಾಕ್ಷಿಯಾಗಲಿದೆ. ಸೌಜನ್ಯಳ ಹತ್ಯೆ ನಡೆದು 11 ವರ್ಷ ಆದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಆಕೆಯ ಹತ್ಯೆಯ ನೈಜ ಆರೋಪಿಯ ಬಂಧನ ಆಗಬೇಕು ಎಂದು ಇಂದು ಹೋರಾಟ. ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ಹೋರಾಟ ನಡೆಸಲು ಮುಂದಾಗಿದೆ. ಈ ಮೂಲಕ ರಾಜ್ಯಾದ್ಯಂತ ಹೋರಾಟದ ಕಿಚ್ಚು ಹಚ್ಚಲು ಸಂಘಟನೆಗಳು ನಿರ್ಧರಿಸಿದೆ. ನಿಂತಿಕಲ್ಲಿನಿಂದ ಸುಳ್ಯದವರೆಗೆ ಸುಮಾರು 22 ಕಿ.ಮೀವರೆಗೆ ಕಾಲ್ನಡಿಗೆ, ಬೃಹತ್ ವಾಹನ ಜಾಥ ಮೂಲಕ ಪ್ರತಿಭಟನೆ ನಡೆಸಲಾಯಿತು. ಬಳಿಕ ಸುಳ್ಯದ ಪೈಚಾರಿನಿಂದ ಕಾಲ್ನಡಿಗೆ ಮೂಲಕ ಸಾಗಿ ಸುಳ್ಯದಲ್ಲಿ ಬೃಹತ್ ಸಭೆ ನಡೆಯಿತು.

ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಪಕ್ಷ, ಜಾತಿ, ಧರ್ಮ ಮರೆತು ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಜೊತೆಗೆ ಸುಳ್ಯದ ಗೌಡರ ಸಂಘ ಸೇರಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದಾರೆ.

- Advertisement -

Related news

error: Content is protected !!