Sunday, June 7, 2026
spot_imgspot_img
spot_imgspot_img

ವಿಟ್ಲ: (ಸೆ.6) ಶ್ರೀ ದುರ್ಗಾ ಕಲಾ ಸಂಘ (ರಿ) ಕರಿಂಕ ನೆಟ್ಲಮುಡ್ನೂರು-ಅನಂತಾಡಿ ಇಲ್ಲಿ 29ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

- Advertisement -
- Advertisement -

ವಿಟ್ಲ: ಶ್ರೀ ದುರ್ಗಾ ಕಲಾ ಸಂಘ (ರಿ) ಕರಿಂಕ ನೆಟ್ಲಮುಡ್ನೂರು-ಅನಂತಾಡಿ ಇಲ್ಲಿ 29ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಸೆ.6 ರಂದು ಬೆಳಿಗ್ಗೆ 9 ರಿಂದ ಕರಿಂಕದಲ್ಲಿ ನಡೆಯಲಿದೆ.

ಬೆಳಿಗ್ಗೆ 9ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೆಟ್ಲಮುಡ್ನೂರು ಗ್ರಾಮದ ಅನಂತಾಡಿ ಗ್ರಾಮ ಆಡಳಿತಾಧಿಕಾರಿ ವೈಶಾಲಿ ಎ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಅನಂತಾಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಕೆ. ಭಾಗವಹಿಸಲಿದ್ದಾರೆ.

ಸಂಜೆ ಗಂಟೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ನರೇಂದ್ರ ರೈ ನೆಲ್ತೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಶ್ರೀಮಹಾಗಣಪತಿ ಡೆವಲಪರ್ಸ್‌‌ನ ಮಾಲಕ ಯಶವಂತ ಪೂಜಾರಿ ಕರಿಂಕ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಟ್ಲ ಪೊಲೀಸ್ ಠಾಣಾ ವೃತ್ತನಿರೀಕ್ಷಕ ಎಚ್.ಇ ನಾಗರಾಜ್, ನೇರಳಕಟ್ಟೆ ಸಿ.ಎ ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಪೂಜಾರಿ ಇಡೆಮುಂಡೆವು, ಅನಂತಾಡಿ ಮಠದಮೂಲೆ ಯುವ ನ್ಯಾಯವಾದಿ ರಮೇಶ್ ಗೌಡ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಗಂಟೆ 9ರಿಂದ ಸ್ಥಳೀಯರಿಗೆ ಆಟೋಟ ಸ್ಪರ್ಧೆಗಳು, ಅಂಗನವಾಡಿ ಮಕ್ಕಳಿಗೆ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!