Monday, June 22, 2026
spot_imgspot_img
spot_imgspot_img

ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣಿಗೆ ಶರಣು

- Advertisement -
- Advertisement -

ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಕೋಲಾರ ಮೂಲದ ಪೃಥ್ವಿರಾಜ್ ಎಂಬವನಿಗೆ ಮೂರು ತಿಂಗಳ ಹಿಂದೆ ಕೃಷ್ಣವೇಣಿಯನ್ನು ವಿವಾಹವಾಗಿದ್ದು, ಮದುವೆಯಾದ ಎರಡು ತಿಂಗಳಿಗೆ ಜಗಳ ಶುರು ಮಾಡಿದ್ದನು ಹಾಗೂ ಮಡದಿಯನ್ನು ನಾಲ್ಕೈದು ಬಾರಿ ಜಗಳ ಮಾಡಿ ತವರಿಗೆ ಕಳುಹಿಸಿದ್ದ.

ಮೃತ ಕೃಷ್ಣವೇಣಿ ಎರಡು ತಿಂಗಳ ಗರ್ಭಿಣಿಯಾಗಿದ್ದು, ಆರೋಪಿಯು ಕೃಷ್ಣವೇಣಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದು, ಘಟನೆ ಕುರಿತು ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!