Tuesday, June 9, 2026
spot_imgspot_img
spot_imgspot_img

ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಗೌರೀಶ ಕಜಂಪಾಡಿಗೆ 4273 ನೇ ರ‍್ಯಾಂಕ್

- Advertisement -
- Advertisement -

ಪುತ್ತೂರು: ಐ.ಐ.ಟಿ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವಕಾಲೇಜಿನ ಗೌರೀಶ ಕಜಂಪಾಡಿ ಅಖಿಲ ಭಾರತ ಮಟ್ಟದಲ್ಲಿ 4273 ನೇ ರ‍್ಯಾಂಕ್ ಗಳಿಸುವುದರ ಮೂಲಕ ಪುತ್ತೂರು ತಾಲೂಕಿನಲ್ಲಿ ಅಮೋಘ ಸಾಧನೆಗೈದ ವಿದ್ಯಾರ್ಥಿಯಾಗಿದ್ದಾನೆ.

ಹಾಗೆಯೇ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸುವ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನೆಯ (ಕೆವಿಪಿವೈ) ಪರೀಕ್ಷೆಯಲ್ಲೂ ಅಖಿಲ ಭಾರತ ಮಟ್ಟದಲ್ಲಿ 454 ನೇ ರ‍್ಯಾಂಕ್ ನ್ನು ಗಳಿಸಿದ್ದನು.

ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪೂರೈಸಿರುವ ಗೌರೀಶ ಕಜಂಪಾಡಿ, ಪೆರ್ಲದ ಕಜಂಪಾಡಿಯ ಬಾಲರಾಜ ಕಜಂಪಾಡಿ ಮತ್ತು ರಾಜನಂದಿನಿ ದಂಪತಿಗಳ ಪುತ್ರ.

ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

- Advertisement -

Related news

error: Content is protected !!