Thursday, June 4, 2026
spot_imgspot_img
spot_imgspot_img

ವಿಟ್ಲ: ಕೊರೊನಾ ನಿಯಂತ್ರಿಸಲು ಪೇಟೆಗೆ ಬರುವ ಜನರ ಗಂಟಲು ದ್ರವ ಪರೀಕ್ಷೆ

- Advertisement -
- Advertisement -

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕೊರೋನ ಟಾಸ್ಕ್ ಪೋರ್ಸ್ ಸಭೆಯಲ್ಲಿ ಕೊರೋನ ನಿಯಂತ್ರಿಸಲು ವಿಟ್ಲ ಪೇಟೆಗೆ ಆಗಮಿಸುವ ಜನರನ್ನುಸ್ವ್ಯಾಬ್ ಪರೀಕ್ಷೆ ನಡೆಸಲಾಗಿದ್ದು, ಇಂದು 132 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಟ್ಲ ಪೇಟೆಗೆ ಜನರಿಗೆ ಬರುವ ಪ್ರವೇಶ ಸ್ಥಳವಾದ ಬೊಬ್ಬೆಕೇರಿ, ನಾಡಕಚೇರಿ, ಮೇಗಿನಪೇಟೆ, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ವಿಟ್ಲ ಪೊಲೀಸರು ಜಂಟಿಯಾಗಿ ನಾಕಾಬಂಧಿ ಅಳವಡಿಸಿದ್ದಾರೆ.

ಗುರುವಾರದಂದು 80 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಇಂದು 132 ಮಂದಿ ಸೇರಿದಂತೆ ಒಟ್ಟು 212 ಮಂದಿಯ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದೆ. ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.

- Advertisement -

Related news

error: Content is protected !!