Monday, August 10, 2026
spot_imgspot_img
spot_imgspot_img

ಕಾಸರಗೋಡು: ಸ್ಕೂಟರ್-ಖಾಸಗಿ ಬಸ್ಸು ನಡುವೆ ಭೀಕರ ಅಪಘಾತ; ಸವಾರ ಮೃತ್ಯು

- Advertisement -
- Advertisement -

ಕಾಸರಗೋಡು: ಸ್ಕೂಟರ್ ಮತ್ತು ಖಾಸಗಿ ಬಸ್ಸು ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಸವಾರನೋರ್ವ ಮೃತಪಟ್ಟಿದ್ದಾರೆ. ಉಪ್ಪಳ ಸೊಂಕಾಲ್ ನ ಇಬ್ರಾಹಿಂ ಖಲೀಲ್ (23) ಮೃತಪಟ್ಟವರು.

ಭಾನುವಾರ ರಾತ್ರಿ ಕುಂಬಳೆ ಭಾಸ್ಕರ ನಗರದಲ್ಲಿ ಅಪಘಾತ ನಡೆದಿತ್ತು. ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಖಲೀಲ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಜೊತೆಗಿದ್ದ ಉಪ್ಪಳ ಮಣಿಮುಂಡದ ಮುಹಮ್ಮದ್ ಮಾಝ್ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!