Thursday, April 25, 2024
spot_imgspot_img
spot_imgspot_img

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ : ದೂರು ದಾಖಲು!!

- Advertisement -G L Acharya panikkar
- Advertisement -

ಕಾಟಿಪಳ್ಳ : ಮಂಗಳೂರಿನ ಕಾಟಿಪಳ್ಳ ಸಮೀಪ ಮಹಿಳೆಯೊಬ್ಬಳು ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಣೆಯಾದ ಭಾರತಿ ಮಾದರ

ನಾಪತ್ತೆಯಾದ ಮಹಿಳೆಯನ್ನು ಭಾರತಿ ಎನ್ನಲಾಗಿದೆ. ಕೊಪ್ಪಳ ಮೂಲದ ಹನುಮಂತ ಅವರು ಪತ್ನಿ ಭಾರತಿ ಮಾದರ ಹಾಗೂ ಇಬ್ಬರು ಮಕ್ಕಳೊಂದಿಗೆ ಸುರತ್ಕಲ್‌ನ ಕಾಟಿಪಳ್ಳದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮಾ.21ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಗಂಡ ಮಲಗಿದ್ದ ವೇಳೆ ಪತ್ನಿ 11 ವರ್ಷದ ಮಗಳು ಹಾಗೂ 9 ವರ್ಷದ ಮಗನೊಂದಿಗೆ ಮನೆ ಮುಂಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ಹೊರಗಡೆ ಹೋಗಿದ್ದು, ಅವರು ಮತ್ತೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ಗಂಡ ನಾಪತ್ತೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಕಾಣೆಯಾದವರ ಚಹರೆ ಇಂತಿದೆ: ಭಾರತಿ ಮಾದರ : ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ, 4 ಅಡಿ 6 ಇಂಚು ಎತ್ತರ, ಬಲಗೈಯಲ್ಲಿ ಎಚ್.ಬಿ. ಎಂಬ ಹಚ್ಚೆ ಇದೆ, ಕನ್ನಡ, ಹಿಂದಿ ಮತ್ತು ತುಳು ಭಾಷೆ ಅರ್ಥವಾಗುತ್ತದೆ. ಕಾಣೆಯಾಗುವ ಸಮಯದಲ್ಲಿ ಹಳದಿ ಬಣ್ಣದಲ್ಲಿ ಕೆಂಪು ಚುಕ್ಕೆಗಳಿರುವ ಸೀರೆ ಹಾಗೂ ಕಪ್ಪು ಬಣ್ಣದ ರವಿಕೆ ಧರಿಸಿರುತ್ತಾರೆ.ಅಮೃತಾ: 3 ಅಡಿ 5ಇಂಚು ಎತ್ತರ, 5ನೇ ತರಗತಿ ಓದುತ್ತಿದ್ದು, ಎಣ್ಣೆ ಕಪ್ಪು ಮೈಬಣ್ಣ, ಕನ್ನಡ ಭಾಷೆ ತಿಳಿದಿರುತ್ತದೆ, ಕಪ್ಪು ಬಣ್ಣದ ಧೋತಿ ಪ್ಯಾಂಟ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿರುತ್ತಾಳೆ.ಗಣೇಶ: 3 ಅಡಿ ಎತ್ತರ, 3ನೇ ತರಗತಿ ಓದುತ್ತಿದ್ದು, ಎಣ್ಣೆ ಕಪ್ಪು ಮೈಬಣ್ಣ, ಕನ್ನಡ ಭಾಷೆ ತಿಳಿದಿರುತ್ತದೆ, ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾರೆ.

- Advertisement -

Related news

error: Content is protected !!