Saturday, June 28, 2025
spot_imgspot_img
spot_imgspot_img

ನಟಿ ಶಿಲ್ಪಾಶೆಟ್ಟಿ ಡಿವೋರ್ಸ್..?; ರಾಜ್ ಕುಂದ್ರಾ ಪೋಸ್ಟ್‌ ವೈರಲ್‌..!!

- Advertisement -
- Advertisement -

ಬಾಲಿವುಡ್ ಬೆಡಗಿ, ಮಂಗಳೂರು ಮೂಲದ ನಟಿ ಶಿಲ್ಪಾಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಮಾಡಿರುವ ಟ್ವೀಟ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಶಿಲ್ಪಾ ಶೆಟ್ಟಿಗೆ ರಾಜ್ ಕುಂದ್ರಾ ವಿಚ್ಛೇದನ ಕೊಟ್ಟರೇ ಎಂಬ ಅನುಮಾನ ಹುಟ್ಟಿಸಿದೆ.

ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾದಲ್ಲಿ ‘ನಾವು ಬೇರ್ಪಟ್ಟಿದ್ದೇವೆ. ಕಷ್ಟದ ಈ ಸಮಯದಲ್ಲಿ ನೀವು ನಮಗಷ್ಟು ಸಮಯ ಕೊಡಿ’ ಎಂದು ಬರೆದುಕೊಂಡಿದ್ದಾರೆ. ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ಹಲವರು ಕಾಮೆಂಟ್ಸ್‌ ಮಾಡುತ್ತಿದ್ದಾರೆ. ಹಲವರು ಈ ಬಗ್ಗೆ ಅಪಹಾಸ್ಯ ಮಾಡುತ್ತಿದ್ದು, ಇದು ಮುಂಬರುವ ಸಿನಿಮಾಕ್ಕೆ ಪ್ರಚಾರದ ಗಿಮಿಕ್ ಎಂದು ಕಾಮೆಂಟ್ ಮಾಡಿದ್ದಾರೆ.

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ 2009ರಲ್ಲಿ ವಿವಾಹವಾದರು. ಅವರಿಗೆ ವಿಯಾನ್ ಹಾಗೂ ಸಮಿಶಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ ಇದ್ದಾರೆ. ರಾಜ್ ಕುಂದ್ರಾ ಅವರು 2021ರಲ್ಲಿ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಅವರು ಜೈಲು ಕೂಡ ಸೇರಿದ್ದರು. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜೈಲಿಗೆ ಹೋಗಿ ಬಂದ ನಂತರ ಅವರು ಸಾರ್ವಜನಿಕವಾಗಿ ಯಾವತ್ತೂ ಮುಖ ತೋರಿಸಿರಲಿಲ್ಲ. ಸದಾ ಫೇಸ್ ಮಾಸ್ಕ್ ಹಾಕಿಕೊಂಡೇ ಮನೆಯಾಚೆ ಕಾಲಿಡುತ್ತಿದ್ದರು. ನಿನ್ನೆಯಷ್ಟೇ ಅವರು ತಮ್ಮ ಮುಖವನ್ನು ಕ್ಯಾಮೆರಾಗೆ ತೋರಿಸಿದ್ದಾರೆ.

ಕೆಲವರು ಅವರ ಜೀವನಚರಿತ್ರೆ UT 69 ಬಿಡುಗಡೆಗೆ ಮುಂಚಿತವಾಗಿ ಪ್ರಮೋಷನ್ ಗಿಮಿಕ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸತ್ಯವೇನು ಎಂಬುದನ್ನು ಕಾದು ನೋಡಬೇಕಷ್ಟೇ!

- Advertisement -

Related news

error: Content is protected !!