Monday, June 15, 2026
spot_imgspot_img
spot_imgspot_img

ದಾಂಪತ್ಯ ಕಲಹ; ಪೊಲೀಸರ ಸಂಧಾನಕ್ಕೆ ಒಪ್ಪದೆ ಆತ್ಮಹತ್ಯೆ ಮಾಡಿಕೊಂಡ ಪತಿ..!

- Advertisement -
- Advertisement -

ದಾಂಪತ್ಯದಲ್ಲಿ ಕಲಹ ಮೂಡಿದ್ದು, ಪೊಲೀಸರ ಸಂಧಾನಕ್ಕೆ ಒಪ್ಪದೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ.

ನಿಖಲ್ (28) ಆತ್ಮಹತ್ಯೆ ಮಾಡಿಕೊಂಡ ಪತಿ. 11 ತಿಂಗಳ ಹಿಂದೆ ನಿಖಿಲ್ ಮತ್ತು ಪ್ರೀತಿ ವಿವಾಹವಾಗಿತ್ತು. ಆದರೆ ದಂಪತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೆ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು. ಇದರಿಂದಾಗಿ ಪ್ರೀತಿ ತವರು ಮನೆಗೆ ಹೋಗಿದ್ದಳು.

ಪ್ರೀತಿ ಮತ್ತು ಕುಟುಂಬಸ್ಥರು ನಿಖಿಲ್​​ನನ್ನು ಕೇಶ್ವಾಪುರ ಠಾಣೆಗೆ ಕರೆಯಿಸಿದ್ದರು. ಠಾಣೆಯಲ್ಲಿ ಪೊಲೀಸರು ನಿಖಲ್​ಗೆ ಮಾನಸಿಕವಾಗಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಕೇಶ್ವಾಪುರ ಪೊಲೀಸರು ನಿಖಲ್​ಗೆ ಒಂದೇ ದಿನದಲ್ಲಿ 2 ಲಕ್ಷ ರೂ. ನೀಡುವಂತೆ ತಾಕೀತು ಮಾಡಿದ್ದರು. ಇದರಿಂದ ಮನನೊಂದು ಮನೆಗೆ ಬಂದ ನಿಖಿಲ್​​​, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!