Wednesday, August 26, 2026
spot_imgspot_img
spot_imgspot_img

7 ವರ್ಷದ ಬಾಲಕಿ ನೆರೆಮನೆಯಲ್ಲಿ ಅನುಮಾನಸ್ಪದವಾಗಿ ಸಾವು..!

- Advertisement -
- Advertisement -

ಮಗಳು ಹಠ ಮಾಡುತ್ತಾಳೆ ಬುದ್ದಿ ಹೇಳಿ ಎಂದು ಪಕ್ಕದ ಮನೆಗೆ ಕಳಿಸಿದ್ದಾಗ 7 ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ನಡೆದಿದೆ.

ಆಕೃತಿ (7) ಮೃತ ಬಾಲಕಿ. ವಿನೋದ್ ಮತ್ತು ನಳಿನ ದಂಪತಿಗಳ ಪುತ್ರಿ ಆಕೃತಿ ಎನ್ನುವ ಬಾಲಕಿ, ಆಕೃತಿ ಪಕ್ಕದ ಮನೆಯ ನಂಜುಂಡಪ್ಪ, ಪಲ್ಲವಿ ಮನೆಗೆ ಹೋದಾಗ ಮೃತಪಟ್ಟಿದ್ದಾಳೆ.

ಪೋಷಕರಿಗೆ ಗಮನಕ್ಕೆ ಬಾರದೆ ನಂಜುಂಡಪ್ಪ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಈ ಬಾಲಕಿ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಿನ್ನೆ ತಡರಾತ್ರಿ 2:10ರ ಸುಮಾರಿಗೆ ಮಗು ವಾಂತಿ ಮಾಡುತ್ತಿದೆ ಎಂದು ನಂಜುಂಡಪ್ಪ ಆಸ್ಪತ್ರೆಗೆ ಕರಕೊಂಡು ಹೋಗಿದ್ದಾರೆ. ಆದ್ರೆ, ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದಕ್ಕೂ ಮೊದಲು ಬಾಲಕಿ ಪೋಷಕರಿಗೆ ಎರಡು ಬಾರಿ ಫೋನ್ ಮಾಡಿದ್ದಾರೆ. ಆದ್ರೆ, ನಿದ್ರೆಯಲ್ಲಿದ್ದ ಬಾಲಕಿ ಪೋಷಕರು ಮನೆ ಬಾಗಿಲು ತೆಗೆದಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ FSL ತಂಡ ಪರಿಶೀಲನೆ ನಡೆಸಿದ ವೇಳೆ ಬಾಲಕಿಯ ಮೈಕೈ ಬಳಿ ರಕ್ತ ಹೆಪ್ಪುಗಟ್ಟಿದ ಗಾಯಗಳು ಕಂಡುಬಂದಿವೆ. ಮಗುವಿಗೆ ಭಯ ಹುಟ್ಟಿಸಲು ಯಾವುದೋ ವಸ್ತುವಿನಿಂದ ಹೊಡೆಯುವ ವೇಳೆ ಉಸಿರುಗಟ್ಟಿ ಸತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಈ ಬಗ್ಗೆ ಮೃತ ಬಾಲಕಿಯ ಪೋಷಕರು ಪಕ್ಕದ ಮನೆಯ ನಂಜುಂಡಪ್ಪ ವಿರುದ್ಧ ದೂರು ನೀಡಿದ್ದು, ಈ ದೂರಿನ ಮೇರೆಗೆ ನೆರೆಮನೆಯ ನಂಜುಂಡಪ್ಪ, ಪಲ್ಲವಿಯನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ.

- Advertisement -

Related news

error: Content is protected !!