ಸಂಘವು 2025-26 ನೇ ಸಾಲಿನಲ್ಲಿ 923 ಕೋಟಿ ವ್ಯವಹಾರ ಮಾಡಿ 2,85,52,315.41 ನಿವ್ವಳ ಲಾಭ ಗಳಿಸಿದೆ- ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು




ಇಡ್ಕಿದು ಸೇವಾ ಸಹಕಾರಿ ಸಂಘವು 2 ಗ್ರಾಮ ವ್ಯಾಪ್ತಿಯಲ್ಲಿ ಉರಿಮಜಲಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದ್ದು, 4 ಶಾಖೆಗಳಾದ ಮಿತ್ತೂರು, ಸೂರ್ಯ, ಕುಳ, ಕಬಕ ಅಡ್ಯಾಲುಕರೆಯಲ್ಲಿ ಹೊಂದಿದ್ದು ಎಲ್ಲವೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಇವರ ಅಧ್ಯಕ್ಷತೆಯಲ್ಲಿ ಕೇಂದ್ರ ಕಚೇರಿ ’ಶತಾಮೃತ’ ದಲ್ಲಿ ನಡೆಯಿತು.

’ಸಭೆಯಲ್ಲಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಮಾತನಾಡಿ ’ಸಹಕಾರಿ ಕ್ಷೇತ್ರದಲ್ಲಿ 107 ವರ್ಷಗಳ ಇತಿಹಾಸ ಹೊಂದಿರುವ ಸಂಘವು 2025-26 ನೇ ಅಂತ್ಯಕ್ಕೆ 4185 “ಎ” ತರಗತಿ ಸದಸ್ಯರನ್ನು ಹೊಂದಿದೆ. ಬ್ಯಾಂಕಿಗ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಗಣನೀಯ ಪ್ರಗತಿ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಇವರಿಂದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸತತ 18ವರ್ಷಗಳಿಂದ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪ್ರಶಸ್ತಿಯನ್ನು ಪಡೆದುಕೊಂಡ ಹೆಗ್ಗಳಿಕೆ ಇಡ್ಕಿದು ಸೇವಾ ಸಹಕಾರಿ ಸಂಘದ್ದಾಗಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಸರ್ವಋತು ರಸ್ತೆ “ಸಹಕಾರಿ ಪಥ” ನಿರ್ಮಾಣ ಮಾಡಿದೆ. 2025-26 ನೇ ಸಾಲಿನಲ್ಲಿ ಸಂಘವು 139.86ಕೋಟಿ ರೂ ದುಡಿಯುವ ಬಂಡವಾಳ ಹೊಂದಿದ್ದು, 923 ಕೋಟಿ ವ್ಯವಹಾರ ಮಾಡಿ 2,85,52,315.41 ಲಾಭಗಳಿಸಿದೆ ಎಂದು ಘೋಷಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ವಾರ್ಷಿಕ ವರದಿ ಮಂಡಿಸಿದರು.
ಮಹಾಸಭೆಯಲ್ಲಿ ಸನ್ಮಾನಿಸಲ್ಪಟ್ಟವರ ವಿವರವನ್ನು ರಾಜೇಶ್ ಕಾರ್ಯಾಡಿ ತಿಳಿಸಿದರು. ಕಾರ್ಯಕ್ರಮದಲ್ಲಿ ತಿರುಮಲೇಶ್ವರ ಭಟ್ ಕೆ. ಎಮ್ ,ಮೋನಪ್ಪ ಎಸ್ , ಮೋಂಟ ಗೌಡ ಬಿ , ಶೇಕಬ್ಬ ಕೆ, ಗೋಪಾಲಕೃಷ್ಣ ಭಟ್ ಪಿ, ಧರ್ಮಣ್ಣ ನಾಯ್ಕ ಕೆ , ಶ್ರೀಮತಿ ರತ್ನ ಗೌರಿ ಕೆ.ಎಸ್, ಚಂದಪ್ಪ ಸಪಲ್ಯ ಡಿ, ವಿಜಯಕುಮಾರ ಕೆ.ಎನ್ , ಸಚ್ಚಿದಾನಂದ ಕೆ ಇವರನ್ನು ಸನ್ಮಾನಿಸಲಾಯಿತು. ಇಡ್ಕಿದು ಕುಳ ಗ್ರಾಮದ ಸ್ವಚ್ಛ ಭಾರತ ಸಿಬ್ಬಂದಿಗಳನ್ನು ಗೌರವಿಸಲಾಯಿತು. 2025-26 ನೇ ಸಾಲಿನಲ್ಲಿ ಉತ್ತಮ ರೀತಿಯಲ್ಲಿ ಉಳಿತಾಯ ಮತ್ತು ಸಾಲದ ವ್ಯವಹಾರಗಳನ್ನು ನಡೆಸಿದ ನವೋದಯ ಗುಂಪುಗಳನ್ನು ಗೌರವಿಸಲಾಯಿತು. ಮಕ್ಕಳ ಗುಂಪಿಗೆ ವಿಶೇಷ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. 2025-26 ನೇ ಸಾಲಿನಲ್ಲಿ ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ವ್ಯಾಪಾರ ವಹಿವಾಟು ಮಾಡಿದವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. 2025-26 ನೇ ಸಾಲಿನಲ್ಲಿ ಸಂಘದ ಕ್ಯಾಂಪ್ಕೋ ವಿಭಾಗದಲ್ಲಿ ಅತೀ ಹೆಚ್ಚು ವಹಿವಾಟು ಮಾಡಿದವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.



ಇಡ್ಕಿದು ಸೇವಾ ಸಹಕಾರಿ ಮಹಾಸಭೆಯಲ್ಲಿ ಉಪಾಧ್ಯಕ್ಷ ರಾಮ್‌ಭಟ್ ನೀರಪಳಿಕೆ, ನಿರ್ದೇಶಕರುಗಳಾದ ಚಂದ್ರಹಾಸ ಕೆಂರ್ದೇಲು, ಜಯಂತ ಕಂಪ, ನವೀನ ಕೆ.ಪಿ, ಉಮೇಶ ವಡ್ಯರ್ಪೆ, ಲೋಹಿತಾಶ್ವ ಎಂ, ಸತೀಶ ಕೆ, ಆನಂದ ಕೆ, ಹೃಷಿಕೇಷ ಕೆ ಎಸ್, ಪದ್ಮಾವತಿ ಕೂವೆತ್ತಿಲ, ಶ್ರೀಮತಿ ವಿದ್ಯಾ ವಿ, ಯೋಗೀಶ ಹೆಚ್, ವೇದಿಕೆಯಲ್ಲಿ, ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಹಲವು ವಿಚಾರಗಳ ಬಗ್ಗೆ ಸಂವಾದ ನಡೆಯಿತು. ಸಂಘದ ಅಧ್ಯಕ್ಷರು ಸುಧಾಕರ ಶೆಟ್ಟಿ ಬೀಡಿನಮಜಲು ಸ್ವಾಗತಿಸಿ, ಉಪಾಧ್ಯಕ್ಷ ರಾಮ್‌ಭಟ್ ನೀರಪಳಿಕೆ ಧನ್ಯವಾದವಿತ್ತರು. ಹರ್ಷಿತಾ ಪ್ರಾರ್ಥಿಸಿದರು. ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.








