Wednesday, August 5, 2026
spot_imgspot_img
spot_imgspot_img

ಮಂಗಳೂರು: ಫುಡ್ ಡೆಲಿವರಿ ಬ್ಯಾಗ್‌ನಲ್ಲಿ ಗಾಂಜಾ ಮಾರಾಟ ; ಇಬ್ಬರ ಬಂಧನ..!

- Advertisement -
- Advertisement -

ಮಂಗಳೂರು: ಫುಡ್ ಡೆಲಿವರಿ ಬ್ಯಾಗ್‌ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಕದ್ರಿ ಠಾಣೆಯ ಪೊಲೀಸರು ಅಪ್ಪರ್ ಬೆಂದೂರು ರಸ್ತೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ವ್ಯಕ್ತಿಗಳು ಕೇರಳದ ತ್ರಿಶೂರ್ ಜಿಲ್ಲೆಯ ಮುಹಮ್ಮದ್ ಜಾಸೀಮ್ ಕೆ.ಎ. (20) ಮತ್ತು ಕೊಲ್ಲಂ ಜಿಲ್ಲೆಯ ಅಲ್ ಅನೀಶ್ (21) ಎಂದು ಗುರುತಿಸಲಾಗಿದೆ.

ಅಪ್ಪರ್ ಬೆಂದೂರು 1ನೇ ಕ್ರಾಸ್ ಮೋಹನ್‌ಬಾಗ್ ಹಿಂಬದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಸ್ತೆಯಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿ ಲಾಭಗಳಿಸುವ ಯೋಜನೆ ಹಾಕಿದ್ದರು ಎನ್ನಲಾಗಿದೆ. ಬಂಧಿತರಿಂದ 40 ಸಾವಿರ ರೂ. ಮೌಲ್ಯದ 1.38 ಕೆ.ಜಿ. ಗಾಂಜಾ, ಡಿಜಿಟಲ್ ತೂಕ ಮಾಪನ, ಸ್ಕೂಟರ್, ಎರಡು ಮೊಬೈಲ್ ಫೋನ್‌ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!