Tuesday, June 9, 2026
spot_imgspot_img
spot_imgspot_img

ಆನೆ ತುಳಿತಕ್ಕೆ ರೈತ ಬಲಿ ..!

- Advertisement -
- Advertisement -

ತೋಟಕ್ಕೆ ನೀರು ಬಿಡುಲು ಹೋದ ರೈತನನ್ನು ಒಂಟಿ ಸಲಗ ತುಳಿದು ಬಲಿ ಪಡೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನಿ ಹಳ್ಳಿಕೆರೆದೊಡ್ಡಿಯಲ್ಲಿ ನಡೆದಿದೆ.

ಆನೆ ತುಳಿತಕ್ಕೆ ಬಲಿಯಾದ ವ್ಯಕ್ತಿ ಉರ್ಫ್ ತಿಮ್ಮಪ್ಪ (64) ಎಂದು ಗುರತಿಸಲಾಗಿದೆ.

ಐದು ಗಂಟೆ ಸುಮಾರಿಗೆ ನೀರು ಬಿಡಲು ತೆರಳಿದ್ದ ತಂದೆ, ಇನ್ನೂ ಯಾಕೆ ಮನೆಗೆ ಬಂದಿಲ್ಲ ಎಂದು ನೋಡಲು ಹೋದಾಗ ತೋಟದಲ್ಲೇ ತಂದೆ ಶವ ಬಿದ್ದಿದ್ದು ಕಂಡು ಬಂದಿದೆ . ಹಲವು ದಿನಗಳಿಂದ ಆನೆಗಳ ಗುಂಪು ಊರಿನ ಸಮೀಪ ಬರುತ್ತಿದ್ದು, ಕೂಡಲೇ ಅವುಗಳನ್ನು ಕಾಡಿಗೆ ಓಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಅಲ್ಲದೆ ಕಾಡಾನೆಗಳ ಗುಂಪು ಹಗಲಿನಲ್ಲಿಯೂ ಊರು ಪ್ರವೇಶ ಮಾಡುತ್ತಿದ್ದು, ಸೂಕ್ತ ಭದ್ರತೆ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಡಿ ಸಿ ಎಂ ಡಿ ಕೆ ಶಿವಕುಮಾರ್ ಕೂಡ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

- Advertisement -

Related news

error: Content is protected !!