Monday, June 15, 2026
spot_imgspot_img
spot_imgspot_img

ವಿಟ್ಲ: ಗುಡ್ಡ ಜರಿದು ಮಣ್ಣಿನ ಅಡಿ ಸಿಲುಕಿದ ಕಾರ್ಮಿಕರು- ಸ್ಥಳೀಯರಿಂದ ರಕ್ಷಣೆ

- Advertisement -
- Advertisement -

ವಿಟ್ಲ: ಗುಡ್ಡ ಜರಿದು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ ಘಟನೆ ಸೂರಿಕುಮೇರ್ ಸಮೀಪದ ಕಾಯರಡ್ಕ ಎಂಬಲ್ಲಿ ನಡೆದಿದೆ.

ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮೇಲಿನ ಗುಡ್ಡ ಜರಿದು ಬಿದ್ದಿದೆ. ಗುಡ್ಡ ಜರಿದು ಮಣ್ಣಿನೊಳಗೆ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದೆ. ರಾಜೇಶ್ ನಾಯ್ಕ ಬಾಯಿಲ, ಉಮೇಶ್ ನಾಯ್ಕ್ ನೆಲ್ಲಿ ಎಂಬವರು ಸಿಕ್ಕಿಹಾಕಿಕೊಂಡಿದ್ದರು.

ಕಾಂಪೌಂಡ್‌ ನಿರ್ಮಾಣಕ್ಕೆ ಮಣ್ಣು ಅಗೆದು ಪಾಯ ಮಾಡುತ್ತಿದ್ದ ವೇಳೆ ಗುಡ್ಡ ಜರಿದು ಮಣ್ಣಿನೊಳಗೆ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಕೂಡಲೇ ರಕ್ಷಣೆ ಮಾಡಿದ ಸ್ಥಳೀಯರು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್.ಇ ನಾಗರಾಜ್, ಕಂದಾಯ ಅಧಿಕಾರಿ ವಿಜಯ್ ಭೇಟಿ ನೀಡಿದ್ದಾರೆ. ಸೋಷಿಯಲ್ ಇಕ್ವ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!