Saturday, June 20, 2026
spot_imgspot_img
spot_imgspot_img

ಮುಲ್ಕಿ: ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ; ಇಬ್ಬರು ಗಂಭೀರ..!

- Advertisement -
- Advertisement -

ಮುಲ್ಕಿ:ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಹಾಗೂ ಸಹಸವಾರ ಗಂಭೀರ ಗಾಯಗೊಂಡ ಘಟನೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ನಡೆದಿದೆ.

ಗಂಭೀರ ಗಾಯಗೊಂಡವರನ್ನು ಕಿನ್ನಿಗೋಳಿ ನಿವಾಸಿಗಳಾದ ಸುಜಿತ್ ಹಾಗೂ ಕೀರ್ತನ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಗಾಯಾಳು ಬೈಕ್ ಸವಾರ ಹಳೆಯಂಗಡಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿರುವ ವೇಳೆ ಮುಕ್ಕ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಹಾಗೂ ಸ್ಕಾರ್ಪಿಯೋ ಜಖಂಗೊಂಡಿದ್ದು ಸವಾರ ಹಾಗೂ ಸಹ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಸ್ಕಾರ್ಪಿಯೋದಲ್ಲಿದ್ದ ಪ್ರಯಾಣಿಕ ಮಹಮ್ಮದ್ ಅಯಾನ್ ಎಂಬುವವರಿಗೆ ಕೂಡ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಕಾರ್ಪಿಯೋ ಚಾಲಕ ಮೊಹಮ್ಮದ್ ಆಶಿಕ್ ಎಂಬುವರ ವಿರುದ್ಧ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!