Sunday, June 21, 2026
spot_imgspot_img
spot_imgspot_img

ಕೆಜಿಎಫ್​ ಚಾಪ್ಟರ್​ 2 ರಿಲೀಸ್​ಗೆ ಡೇಟ್​ ಫಿಕ್ಸ್

- Advertisement -
- Advertisement -

ಪ್ಯಾನ್​ ಇಂಡಿಯಾ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್​ ಚಾಪ್ಟರ್​ 2’ ರಿಲೀಸ್​ಗೆ ಡೇಟ್​ ಫಿಕ್ಸ್​​ ಆಗಿದೆ. 2021ರಲ್ಲಿ ರಿಲೀಸ್ ಆಗಲಿರುವ ಮೊದಲ ಪ್ಯಾನ್ ಇಂಡಿಯಾ‌ ಸಿನಿಮಾ ಆಗಲಿದೆ ‘ಕೆಜಿಎಫ್​ ಚಾಪ್ಟರ್​ 2.’ ಹೌದು.. 2021ರ ಜನವರಿ 14ರಂದು ‘ಕೆಜಿಎಫ್​ ಚಾಪ್ಟರ್​ 2’ ರಿಲೀಸ್​ಗೆ ಮುಹೂರ್ತ ಬಹುತೇಕ ಫಿಕ್ಸ್ ಆಗಿದೆ.

ಸದ್ಯ ಕರಾವಳಿ ತೀರದಲ್ಲಿ ಶೂಟಿಂಗ್​ ಮುಗಿಸಿರುವ ಕೆಜಿಎಫ್​ ತಂಡ ಮುಂದಿನ ಚಿತ್ರೀಕರಣವನ್ನ ಬೆಂಗಳೂರು ಹಾಗೂ ಹೈದರಾಬಾದ್​ನಲ್ಲಿ ಮಾಡಲು ರೆಡಿಯಾಗ್ತಿದೆ. ಇನ್ನು, ‘ಅಧೀರ’ ಸಂಜಯ್​ ದತ್​ ಶೂಟಿಂಗ್​ ಕೂಡ ನವೆಂಬರ್​ ತಿಂಗಳಲ್ಲಿ ಶುರುವಾಗಲಿದೆ ಅಂತ ಚಿತ್ರತಂಡ ತಿಳಿಸಿದೆ.

ಕರಾವಳಿ ಭಾಗದ ಶೂಟಿಂಗ್​ ವೇಳೆ ಯಶ್​ ಹಾಗೂ ನಾಯಕಿ ಶ್ರೀನಿಧಿ ಶೆಟ್ಟಿ ಜೊತೆಗೆ ನಟ ಹರೀಶ್​ ರಾಯ್​ ಕೂಡ ಭಾಗಿಯಾಗಿದ್ದರು. ‘ಕೆಜಿಎಫ್​ ಚಾಪ್ಟರ್​ 1’ರಲ್ಲಿ ಹರೀಶ್​ ರಾಯ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಪಾತ್ರದ ಮುಂದುವರೆದ ಭಾಗ ಇದಾಗಿದೆ. ಚಿತ್ರದ ಶೂಟಿಂಗ್​ ಭರದಿಂದ ಸಾಗ್ತಿದೆ. ಮುಂದಿನ ತಿಂಗಳ ಒಳಗೆ ಇಡೀ ಚಿತ್ರೀಕರಣ ಕಂಪ್ಲೀಟ್​ ಮಾಡುವ ಪ್ಲಾನ್​ ಮಾಡಿಕೊಂಡಿದೆ ಕೆಜಿಎಫ್​ ಚಿತ್ರತಂಡ.

- Advertisement -

Related news

error: Content is protected !!