Wednesday, August 26, 2026
spot_imgspot_img
spot_imgspot_img

ಕಡಬ: ಚಲಿಸುತ್ತಿದ್ದ ಕಾರು ಹಾಗೂ ರಸ್ತೆ ಬದಿಯ ಅಂಗಡಿಯ ಮೇಲೆ ಬಿದ್ದ ಬೃಹತ್ ಮರ; ಇಬ್ಬರು ಗಂಭೀರ ಗಾಯ..!

- Advertisement -
- Advertisement -

ಕಡಬ: ಚಲಿಸುತ್ತಿದ್ದ ಟಾಟಾ ಸುಮೋ ಹಾಗೂ ಅಂಗಡಿಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ಜಂಕ್ಷನ್ ನಲ್ಲಿ ನಡೆದಿದೆ.

ಗಂಭೀರ ಗಾಯಾಗೊಂಡವರನ್ನು ಬಿಳಿನೆಲೆ ನಿವಾಸಿ ಶೇಖ‌ರ್ ಎಂದು ಗುರುತಿಸಲಾಗಿದೆ.

ಸುಬ್ರಹ್ಮಣ್ಯದಿಂದ ನೆಟ್ಟಣ ಕಡೆಗೆ ತೆರಳುತ್ತಿದ್ದ ಟಾಟಾ ಸುಮೋ ಹಾಗೂ ಕೈಕಂಬ ಜಂಕ್ಷನ್ ನಲ್ಲಿದ್ದ ಗೂಡಂಗಡಿಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದು ಘಟನೆಯಲ್ಲಿ ವಾಹನ ಚಾಲಕ ಹಾಗೂ ಮತ್ತೋರ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

- Advertisement -

Related news

error: Content is protected !!