


ಅಯೋಧ್ಯಾಧಿಪತಿ ಪ್ರಭು ಶ್ರೀಬಾಲರಾಮ ಪ್ರಾಣಪ್ರತಿಷ್ಠಾ ಮಹೋತ್ಸವವು ಜ.22ರಂದು ನಡೆಯಲಿದ್ದು ಆ ಪ್ರಯುಕ್ತ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆವರಣದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು ಜ.22ನೇ ಸೋಮವಾರ ಬೆಳಿಗ್ಗೆ 10 ರ ನಂತರ ಕವಾಟೊದ್ಘಾಟನೆಯ ನಂತರ ದೇವಸ್ಥಾನದ ಹೊರಾಂಗಣದ ವೇದಿಕೆಯಲ್ಲಿ ದೀಪ ಪ್ರಜ್ವಲನೆ ನಡೆಯಲಿದೆ.
ತದನಂತರ ಅಯೋಧ್ಯೆಗೆ 1990, 1992 ಹಾಗೂ 2003ರಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಕರಸೇವಕರಿಂದ ಪುಷ್ಪಾರ್ಚನೆ ಮತ್ತು ಕರಸೇವಕರಿಗೆ ಶಾಲು ಹೊದಿಸಿ ಗೌರವಾರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಜನೆ, ಸಾಮೂಹಿಕವಾಗಿ 108 ಬಾರಿ ಶ್ರೀ ರಾಮನಾಮ ತಾರಕ ಜಪ, ಹನುಮಾನ್ ಚಾಲೀಸ್, ಅಯೋಧ್ಯೆಯ ಹೋರಾಟದ ಮೆಲುಕು (ಬೌದ್ಧಿಕ್ )ನಡೆಯಲಿದೆ. 11.50 ರಿಂದ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರತಿಷ್ಠಾ ಮಹೋತ್ಸವದ ನೇರ ಪ್ರಸಾರ ವೀಕ್ಷಣೆ ನಡೆಯಲಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾ ಪೂಜೆಯ ಸಮಯದಲ್ಲಿ ವೇದಿಕೆಯಿಂದಲೇ ಆರತಿ ಬೆಳಗುವುದು.
ಈ ಮಹಾಪೂಜೆಯ ನಂತರ ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








