Thursday, June 18, 2026
spot_imgspot_img
spot_imgspot_img

ಉಡುಪಿ: ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ; ಯುವಕ ಸ್ಥಳದಲ್ಲೇ ಮೃತ್ಯು

- Advertisement -
- Advertisement -

ಉಡುಪಿ: ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಬಂಟಕಲ್ಲು ಅರಸೀಕಟ್ಟೆಯ ಬಳಿ ನಡೆದಿದೆ.

ಬೈಕ್ ಸವಾರ ದರ್ಶನ್ (24 ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಬೈಕ್ ಸವಾರ ಮೂಲತಃ ಕಾರವಾರ ಕಡೆಯವನಾಗಿದ್ದು ಶಂಕರಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ. ಕೆಲವೇ ದಿನಗಳ ಹಿಂದೆ ಇದೇ ಯುವಕ ಬೈಕ್ ಅಫಘಾತದಲ್ಲಿ ಕೈ ಮೂಳೆ ಮುರಿತಕ್ಕೆ ಒಳಗಾಗಿ ಮನೆಯಲ್ಲಿದ್ದ ಎನ್ನಲಾಗಿದೆ.

ಯುವಕ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದು, ಅಫಘಾತದ ರಭಸಕ್ಕೆ ಮೃತನ ತಲೆಬುರುಡೆ ಹೊರಕ್ಕೆ ಬಿದ್ದ ದೃಶ್ಯ ಸೆರೆಯಾಗಿದೆ. ಶಿರ್ವ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಂಬುಲೆನ್ಸ್ ವಾಹನದಲ್ಲಿ ಮೃತ ಶರೀರವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಶವಗಾರದಲ್ಲಿರಿಸಲಾಗಿದೆ.

- Advertisement -

Related news

error: Content is protected !!