Saturday, June 28, 2025
spot_imgspot_img
spot_imgspot_img

ಮಕ್ಕಳ ಕಳ್ಳರ ಆತಂಕ – ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ

- Advertisement -
- Advertisement -

ಶಾಲೆ ಬಳಿ ಎರಡನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ಪ್ರಯತ್ನಿಸಿದ್ದು, ಅದು ವಿಫಲವಾಗಿರುವ ಘಟನೆ ಬೆಳಗಾವಿಯ ಚಿಕ್ಕೋಡಿ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಲಾಗಿದ್ದು, ಬೈಕ್ ಮೇಲೆ ಬಂದು ಅಪಹರಿಸಲು ವಿಫಲ ಯತ್ನ ನಡೆಸಿ ಕಳ್ಳರು ಪರಾರಿಯಾಗಿದ್ದಾರೆ.

ಶಾಲೆ ಕಾಂಪೌಂಡ್ ಬಳಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕುಳಿತ ಕಿಡ್ನಾಪರ್ಸ್ ವಿದ್ಯಾರ್ಥಿನಿ ಬರುವುದನ್ನೇ ಕಾಯುತ್ತಿದ್ದ. ಶಾಲೆಯಿಂದ ವಿದ್ಯಾರ್ಥಿನಿ ಹೊರ ಬರುತ್ತಿದ್ದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಾಲಕಿಯನ್ನು ಅಪಹರಿಸಿ 200 ಮೀಟರ್ ಓಡಿದ್ದಾನೆ. ಬಳಿಕ ವಿದ್ಯಾರ್ಥಿ ವ್ಯಕ್ತಿಯ ಕೈಗೆ ಕಚ್ಚಿ ಆತನಿಂದ ತಪ್ಪಿಸಿಕೊಂಡು ಬಂದಿದ್ದಾಳೆ.

- Advertisement -

Related news

error: Content is protected !!