Saturday, June 28, 2025
spot_imgspot_img
spot_imgspot_img

ವಾಹನಗಳಿಗೆ ಹೆಚ್.ಎಸ್. ಆರ್‍.ಪಿ ನಂಬರ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

- Advertisement -
- Advertisement -

ಮಂಗಳೂರು: ಫೆ.17 ರಂದು ವಾಹನಗಳಿಗೆ ಹೆಚ್.ಎಸ್. ಆರ್‍.ಪಿ ನಂಬರ ಪ್ಲೇಟ್ ಅಳವಡಿಕೆಗೆ ಸರಕಾರ ಗಡುವು ನೀಡಿದ್ದು, ಇದೀಗ ಸಾರಿಗೆ ಸಚಿವ ಸಚಿವ ರಾಮಲಿಂಗ ರೆಡ್ಡಿ, ನಂಬರ್ ಪ್ಲೇಟ್ ಅಳವಡಿಕೆಗೆ ಇನ್ನೂ 3 ತಿಂಗಳು ಅವಧಿ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಮಾಡಿಸಿದ್ದ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (HSRP) ಅವಳಡಿಕೆ ಕಡ್ಡಾಯ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಫೆಬ್ರವರಿ 17 ರೊಳಗೆ ಹೆಚ್. ಎಸ್. ಆರ್. ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಡೆಡ್ ಲೈನ್ ನೀಡಿತ್ತು. ನಂಬರ್ ಪ್ಲೇಟ್ ಅಳವಡಿಸದಿದ್ದಲ್ಲಿ ದಂಡ ವಿಧಿಸುವ ಕುರಿತು ಸೂಚನೆ ನೀಡಿತ್ತು.

ಇದೀಗ ವಿಧಾನಪರಿಷತ್ ನಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಈ ಕುರಿತು ಪರಿಷತ್ ಸದಸ್ಯ ಮಾದೇಗೌಡ ಪ್ರಶ್ನಿಸಿ ಅವಧಿ ವಿಸ್ತರಿಸಲು ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ವಾಹನಗಳಿಗೆ ಹೆಚ್. ಎಸ್. ಆರ್. ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಇನ್ನೂ 3 ತಿಂಗಳು ಅವಧಿ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!