Wednesday, May 1, 2024
spot_imgspot_img
spot_imgspot_img

ಮೆಟ್ರೋ ರೈಲಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ..!

- Advertisement -G L Acharya panikkar
- Advertisement -

ನಮ್ಮ ಮೆಟ್ರೋ ರೈಲಿನಲ್ಲಿ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬಂಧಿಸಿ ಪೊಲೀಸರಿಗೊಪ್ಪಿಸಿದ ಬೆಂಗಳೂರಿನಲ್ಲಿ ಘಟನೆ ನಡೆದಿದೆ.

ಬಂಧಿತ ಆರೋಪಿ ನೆಲಮಂಗಲದ ನೇಕಾರರ ಕಾಲೋನಿ ನಿವಾಸಿ ಲೋಕೇಶ್ ಆಚಾರ್ (30) ಎಂದು ಗುರುತಿಸಲಾಗಿದೆ.

22 ವರ್ಷದ ಮಹಿಳೆ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸಿದ್ದರು. ಮಹಿಳೆ ಪ್ರತಿನಿತ್ಯ ರಾಜಾಜಿನಗರ ದಿಂದ ಎಂಜಿ ರೋಡ್ ವರೆಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ ಪೀಕ್ ಅವರ್ ರಶ್ ಇದ್ದಿದ್ದರಿಂದ ಇದನ್ನೆ ಬಂಡವಾಳ ಮಾಡಿಕೊಂಡ ಕಾಮುಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆಯನ್ನ ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿದ್ದಾನೆ.

ಎರಡು ಮೆಟ್ರೋ ಕಾರ್ಡ್‌ಗಳನ್ನು ಬಳಸ್ತಿರೋ ಕಾಮುಕ. ಹೆಚ್ಚಾಗಿ ರಶ್ ಇರುವ ಸಮಯ ನೋಡಿಕೊಂಡು ಮೆಟ್ರೋ ಹತ್ತುವ ಸೈಕೋ. ಬೆಳಗ್ಗೆ, ಸಾಯಂಕಾಲ ಪ್ರಯಾಣಿಕರಿಂದ ರಶ್ ಆಗಿರುವ ಮೆಟ್ರೋ ಹತ್ತುವ ಕಾಮುಕ ಮಹಿಳೆ, ಕಾಲೇಜು ಹುಡುಗಿಯರಿಗೆ ಹಿಂದೆ ಮುಂದೆ ನಿಂತು ತಳ್ಳಾಟ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ. ನಿನ್ನೆಯೂ ಹಾಗೆ ಮಾಡಿದ್ದಾನೆ, ಆದರೆ ಯುವತಿ ತಕ್ಷಣ ಕೂಗಿಕೊಂಡಿದ್ದಾಳೆ.

ಯುವತಿ ಕೂಗಿಕೊಳ್ತಿದ್ದಂತೆ ಇದರಿಂದ ಗಾಬರಿಗೊಂಡು ಆರೋಪಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೆಂಪೆಗೌಡ ಮೆಟ್ರೋ ನಿಲ್ದಾಣದಲ್ಲಿ ಇಳಿದು ಓಡುತ್ತಿರುವಾಗ ಹಿಡಿದ ಭದ್ರತಾ ಸಿಬ್ಬಂದಿ, ಆರೋಪಿ ಎಸ್ಕಲೇಟರ್ ಬಳಸಿ ವೇಗವಾಗಿ ಮುಂದೆ ಹೋದಾಗ ಮಹಿಳಾ ಪ್ರಯಾಣಿಕರು ಹಿಡಿದುಕೊಳ್ಳುವಂತೆ ಕೂಗಿದ್ದಾರೆ. ಗಲಾಟೆ ಕೇಳಿಸಿಕೊಂಡ ಭದ್ರತಾ ಅಧಿಕಾರಿ ಪುಟ್ಟಮಾದಯ್ಯ ಹಾಗೂ ದಿವಾಕರ್ ತಕ್ಷಣ ಸ್ಥಳಕ್ಕೆ ಆಗಮಿಸಿ, ಲೋಕೇಶ್ ಆಚಾರ್ ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಹಿಂದೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯೋರ್ವಳ ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದ ಆರೋಪಿ ಈ ಪ್ರಕರಣಕ್ಕೆ ಸಂಬಂಧ ಪ್ರಕರಣ ದಾಖಲಾಗಿತ್ತು. ಆದರೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ ,ಇದೀಗ ಮತ್ತೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ.

- Advertisement -

Related news

error: Content is protected !!