Monday, June 30, 2025
spot_imgspot_img
spot_imgspot_img

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕೇರಳ ಮೂಲದ ದಂಪತಿ, ಅವಳಿ ಪುತ್ರರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಕೇರಳ ಕುಟುಂಬದ ನಾಲ್ವರು ಸದಸ್ಯರು ಕ್ಯಾಲಿಫೋರ್ನಿಯಾದ ಸ್ಯಾನ್ ಮ್ಯಾಟಿಯೊ ನಗರದಲ್ಲಿನ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಆತನ ಪತ್ನಿ ಅಲೀಸ್ ಬೆಂಝಿಗರ್ (40) ಹಾಗೂ ನಾಲ್ಕು ವರ್ಷದ ಅವಳಿ ಪುತ್ರರು ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.

ದಂಪತಿ ವಾಸವಿದ್ದ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳಿಗೆ ಮನೆಯೊಳಗೆ ಕಿಟಕಿಯ ಮೂಲಕ ಪ್ರವೇಶಿಸಿದಾಗ, ಸ್ನಾನ ಗೃಹದಲ್ಲಿ ಇಬ್ಬರು ವಯಸ್ಕರು ಗುಂಡೇಟಿನ ಗಾಯಗಳಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನಾ ಸ್ಥಳದಲ್ಲಿ ಪಿಸ್ತೂಲ್ ಕಂಡು ಬಂದಿದೆ. ಅವಳಿ ಬಾಲಕರ ಮೃತದೇಹಗಳು ಬೆಡ್ ರೂಂನಲ್ಲಿ ಪತ್ತೆಯಾಗಿದ್ದಾರೆ.

ಇದು ಹತ್ಯೆ ಅಥವಾ ಆತ್ಮಹತ್ಯೆಯೋ ಎಂದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ.

- Advertisement -

Related news

error: Content is protected !!