Monday, June 15, 2026
spot_imgspot_img
spot_imgspot_img

ಕಾಸರಗೋಡು : ತಾಯಿ ಮತ್ತು ಹೆಂಡತಿಯ ಕೊಂದು ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಕಾಸರಗೋಡು : ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆಯಾದ ಘಟನೆ ಕಾಸರಗೋಡಿನ ಅವಿಕ್ಕರ ಎಂಬಲ್ಲಿ ನಡೆದಿದೆ.

ಮೃತರನ್ನು ಸೂರ್ಯ ವಾಚ್ ವರ್ಕ್ಸ್ ಮಾಲೀಕ ಪಿ.ಕೆ.ಸೂರ್ಯಪ್ರಕಾಶ್, ಪತ್ನಿ ಕೆ.ಗೀತಾ (59), ಸೂರ್ಯಪ್ರಕಾಶ್ ಅವರ ತಾಯಿ ಕೆ.ಲೀಲಾ (94) ಮೃತರು. ಪತ್ನಿ ಮತ್ತು ತಾಯಿಯ ಕತ್ತು ಸೀಳಿ ನಂತರ ಸೂರ್ಯಪ್ರಕಾಶ್ ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸೂರ್ಯಪ್ರಕಾಶ್ ಅವರು ಕುಟುಂಬ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಬಗ್ಗೆ ಡೆತ್ ನೋಟ್ ಸಿಕ್ಕಿದೆ ಎಂದು ತಿಳಿದುಬಂದಿದೆ.

ಶನಿವಾರ ಬೆಳಿಗ್ಗೆ ಸೂರ್ಯಪ್ರಕಾಶ್ ಅವರ ಮಗ ಅಜಯ್ ಪ್ರಕಾಶ್ ಅವರು ತಂದೆಯ ಜೊತೆ ಮಾತನಾಡಿದ್ದರು ಎಂದು ಹೇಳಲಾಗಿದೆ. ಈ ವೇಳೆ ಗೀತಾ ಮತ್ತು ಲೀಲಾ ಸಾವಿನ ಬಗ್ಗೆ ಸೂರ್ಯಪ್ರಕಾಶ್ ಮಗನಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ನಂತರ, ಅಜಯ್ ಪ್ರಕಾಶ್ ಅವರ ಸೂಚನೆಯ ಆಧಾರದ ಮೇಲೆ ಅವರ ಸ್ನೇಹಿತರೊಬ್ಬರು ಅವರ ನಿವಾಸಕ್ಕೆ ಧಾವಿಸಿ ನೋಡಿದಾಗ ಮೂವರೂ ಶವವಾಗಿ ಪತ್ತೆಯಾಗಿದ್ದಾರೆ. ಗೀತಾ ಮತ್ತು ಲೀಲಾ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೂರ್ಯಪ್ರಕಾಶ್ ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.

- Advertisement -

Related news

error: Content is protected !!