



ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಡಾ. ಉರಾಲ್ಸ್, ವೆರಿಕೋಸ್ ವೇನ್ಸ್, ಆಯುರ್ವೇದ ಕೇರ್, ಶೃಂಗೇರಿ ಇವರಿಂದ ಒಂದು ದಿನದ ಕಾರ್ಯಗಾರ ಮತ್ತು ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ಕಾರ್ಯಕ್ರಮ ಫೆ. 23 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಶ್ರೀ ದೇವಳದ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ದೇವಳದ ಅರ್ಚಕರು, ದೈವನರ್ತಕರು, ದೇವಳದ ಸಿಬ್ಬಂದಿಗಳು, ಪೋಲೀಸು ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು ಮತ್ತು ಊರ ನಾಗರಿಕರಿಗೆ ಇದರ ಸದುಪಯೋಗ ಪಡೆದಕೊಳ್ಳುವ ಅವಕಾಶ ಇರುತ್ತದೆ.
ಈ ಕಾರ್ಯಕ್ರದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಳ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಮತ್ತು ಸರ್ವ ಸದಸ್ಯರು, ದೇವಳದ ಮಾಸ್ಟರ್‌ಪ್ಲಾನ್ ಸಮಿತಿ ಸರ್ವ ಸದಸ್ಯರು, ದೇವಳದ ಕಾರ್ಯನಿರ್ವಹಣಾಧಿಕಾರಿ, ಸುಳ್ಯ ವೃತ್ತ ನಿರೀಕ್ಷಕ ಶ್ರೀ ಸತ್ಯನಾರಾಯಣ, ಸುಬ್ರಹ್ಮಣ್ಯ ಪೋಲೀಸು ಠಾಣೆ ನಿರೀಕ್ಷಕ ಶ್ರೀ ಕಾರ್ತಿಕ್, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಇವರುಗಳು ಭಾಗವಹಿಸಲಿದ್ದಾರೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.








