



ಒಕ್ಕೆತ್ತೂರು: ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಒಕ್ಕೆತ್ತೂರು ಇಲ್ಲಿ ಶಿವರಾತ್ರಿಯ ವರ್ಷಾವಧಿ ಜಾತ್ರೆ ಹಾಗೂ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ 43 ನೇ ವರ್ಷದ ಭಜನಾ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೊಜೆ ಮಾ 8 ನೇ ಶುಕ್ರವಾರದಿಂದ ಮಾ10 ನೇ ಅದಿತ್ಯವಾರದ ವರೆಗೆ ನಡೆಯಲಿದೆ.

ದಿನಾಂಕ 7-03-2024 ನೇ ಗುರುವಾರ ರಾತ್ರಿ ಗಂಟೆ 7:00 ರಿಂದ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಬಳಿಕ ರಾತ್ರಿ 8:00 ರಿಂದ ಪುರಂದರ ಇಂದ್ರಪಡ್ಪು ಮತ್ತು ಬಳಗದವರಿಂದ ಭಕ್ತಿ-ಭಾವ ಗೀತೆಗಳ ರಸಮಂಜರಿ ಹಾಗೂ ನೃತ್ಯ ನಡೆಯಲಿದೆ.

ದಿನಾಂಕ: 8-03-2024 ನೇ ಶುಕ್ರವಾರ ಮಹಾಶಿವರಾತ್ರಿಯ ದಿನ ಬೆಳಿಗ್ಗೆ 9:00 ರಿಂದ ಪಂಚಾಮೃತ, ರುದ್ರಾಭಿಷೇಕ, ಸಾಮೂಹಿಕ ಸೀಯಾಳಭಿಷೇಕ ನಡಯಲಿದೆ. ಬೆಳಿಗ್ಗೆ 9:30 ಕ್ಕೆ ಶ್ರೀ ಸತ್ಯನಾರಾಯಣ ದೇವರ ಪೂಜಾರಂಭ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆದು ಬಳಿಕ ರಾತ್ರಿ 10:00 ಕ್ಕೆ ಶ್ರೀ ರಂಗಪೂಜೆ ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ಅಖಂಡ ಭಜನೆ ನಡೆಯಲಿದೆ.

ದಿನಾಂಕ: 9-03-2024 ನೇ ಶನಿವಾರ ಬೆಳಿಗ್ಗೆ 8:00 ರಿಂದ ಪ್ರಾರ್ಥನೆ, ಗಣಹೋಮ, ನವಕ, ಕಲಶಪೂಜೆ, ರುದ್ರಾಭಿಷೇಕ ,ಪಂಚಾಮೃತಾಭಿಷೇಕ, ಕಲಶಾಭಿಷೇಕ, ಬಲಿವಾಡ ಕೂಟ, ನಾಗಬನದಲ್ಲಿ ನಾಘತಂಬಿಲ, ಮಾಮೇಶ್ವ ದೇವರಕಾಡು ವನದುರ್ಗೆ- ಗುಳಿಗ ಸಾಬಿಧ್ಯದಲ್ಲಿ ತಂಬಿಲ ನಡೆಯಲಿದೆ. ಮಧ್ಯಾಹ್ನ 12:00 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ ಸಂಜೆ 6:00 ರಿಂದ ದೇಪಾರಾಧನೆ, ರಾತ್ರಿಪೂಜೆ, ಕಾರ್ತಿಕ ಪೂಜೆ, ಶ್ರೀ ದೆಔರ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ: 10-03-2024 ನೇ ಆದಿತ್ಯವಾರ ಬೆಳಿಗ್ಗೆ 9:00 ರಿಂದ ಶ್ರೀ ಭೂತಬಲಿ, ದೇಪಬಲಿ, ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಭಕ್ತಾದದಿಗಳಿಗೆ ರಾಜಾಂಗಣ ಪ್ರಸಾದ ಮಹಾಪೂಜೆ, ಮಂಗಳ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1:00 ರಿಂದ ಅನ್ನಸಂತರ್ಪಣೆ ” ಪಿಲಿಚಂಡಿ” ದೈವದ ನೇಮೋತ್ಸವ ಕೊರತಿ ಮತ್ತು ಕಕ್ರಿ ಚಾಮುಂಡಿ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.









