Sunday, June 29, 2025
spot_imgspot_img
spot_imgspot_img

ಬಸ್- ಬೈಕ್ ಡಿಕ್ಕಿ; ಬಸ್ಸಿನಡಿಗೆ ಬಿದ್ದು ವಿದ್ಯಾರ್ಥಿ ಸಾವು..!

- Advertisement -
- Advertisement -

ಕಾರಿಗೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ತಪ್ಪಿದ ಬೈಕ್‌ನಿಂದ ವಿದ್ಯಾರ್ಥಿಯೊಬ್ಬ ಬಸ್‌ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕೊಟ್ಟಾಯಂನಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿ ಪಾಲಾ ಸೈಂಟ್ ಥಾಮಸ್ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಅಮಲ್ ಶಾಜಿ(18) ಎಂದು ಗುರುತಿಸಲಾಗಿದೆ.

ಪುಲಿಯನ್ನೂರಿನಿಂದ ಹಿಂತಿರುಗುತ್ತಿದ್ದ ಅಮಲ್ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದ್ದಾರೆ. ಆಗ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಗಿ ಅಮಲ್ ಎದುರಿನಿಂದ ಬರುತ್ತಿದ್ದ ಟೂರಿಸ್ಟ್ ಬಸ್ಸಿನ ಕೆಳಗೆ ಬಿದ್ದಿದ್ದಾರೆ. ಬಸ್ಸಿನ ಹಿಂಬದಿಯ ಚಕ್ರಗಳು ಆತನ ತಲೆಯ ಮೇಲೆ ಹರಿದು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಬಿಡುಗಡೆ ಮಾಡಲಾಗುವುದು. ಏಟುಮನೂರು-ಪೂಂಜಾರ್ ರಾಜ್ಯ ಹೆದ್ದಾರಿಯ ಪುಲಿಯನ್ನೂರು ಜಂಕ್ಷನ್‌ನಲ್ಲಿ ಗುರುವಾರ ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

- Advertisement -

Related news

error: Content is protected !!