Monday, June 22, 2026
spot_imgspot_img
spot_imgspot_img

ಬಂಟ್ವಾಳ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ- ಮೂವರಿಗೆ ಗಾಯ

- Advertisement -
- Advertisement -

ಬಂಟ್ವಾಳ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಮೂರು ಮಂದಿ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಜಿಪಮೂಡ ಗ್ರಾಮದ ಬೇಂಕ್ಯ ಎಂಬಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಗಾಯಾಳುಗಳನ್ನು ಬೈಕ್ ಸವಾರ ಜಲಾಲುದ್ದೀನ್, ಸಹಸವಾರ ಅಬ್ದುಲ್ ಸಲಾಂ ಹಾಗೂ ಇನ್ನೊಂದು ಬೈಕ್ ಸವಾರ ಸತ್ತಿವೇಲು ಎಂದು ಗುರುತಿಸಲಾಗಿದೆ.

ನರಿಂಗಾನ ನಿವಾಸಿ ಅಬ್ದುಲ್ ಸಲಾಂ ಹಾಗೂ ಜಲಾಲುದ್ದೀನ್ ಅವರು ತಮ್ಮ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಸಜಿಪಮೂಡ ಗ್ರಾಮದ ಬೇಂಕ್ಯ ಎಂಬಲ್ಲಿ ಸತ್ತಿವೇಲುರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಎರಡೂ ಬೈಕ್ ಸವಾರರು ಕೂಡಾ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ  ಪೊಲೀಸ್ ಠಾಣೆಯಲ್ಲಿ ಅ.ಕ್ರ : 50/2024 ಕಲಂ :  279,337 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!