- Advertisement -
- Advertisement -



ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ದಾವಣಗೆರೆ ಹೆಚ್ಚುವರಿ ಎಸ್ಪಿ ಗನ್ ಮ್ಯಾನ್ ಸ್ಥಿತಿ ಗಂಭೀರವಾಗಿದ್ದು, ಗನ್ ಮ್ಯಾನ್ ಪತ್ನಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಕಡೂರಿನ ತಂಗಲಿ ಬಳಿ ನಡೆದಿದೆ.
ಗನ್ ಮ್ಯಾನ್ ನನ್ನು ಜಯಣ್ಣ ಎಂದು ಗುರುತಿಸಲಾಗಿದೆ. ಜಯಣ್ಣ ಪತ್ನಿ ಸುಮಾ(25) ಮೃತ ಮಹಿಳೆ
ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ, ಪತ್ನಿ ಜೊತೆ ಕೆಲಸಕ್ಕೆಂದು ಬೈಕ್ ನಲ್ಲಿ ಹೊರಟಿದ್ದರು ಎನ್ನಲಾಗಿದೆ. ಒನ್ ವೇ ನಲ್ಲಿ ಬಂದ ಲಾರಿ ಚಾಲಕನಿಂದ ಅಪಘಾತ ನಡೆದಿದೆ. ಪೇದೆ ಜಯಣ್ಣ ಸ್ಥಿತಿ ಗಂಭೀರವಾಗಿದ್ದು ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
- Advertisement -








