Saturday, June 20, 2026
spot_imgspot_img
spot_imgspot_img

ಬಂಟ್ವಾಳ : ಸ್ಕೂಟರ್‍-ಕಾರು ಢಿಕ್ಕಿ; ಸವಾರ ಮೃತ್ಯು

- Advertisement -
- Advertisement -

ಬಂಟ್ವಾಳ : ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಜಿಪನಡು ಸಮೀಪದ ದೇರಾಜೆ ಎಂಬಲ್ಲಿ ಗುರುವಾರ(ಜೂ.18) ಸಂಜೆ ವೇಳೆ ಸಂಭವಿಸಿದೆ.

ಮೃತ ಸ್ಕೂಟರ್ ಸವಾರನನ್ನು ಸಜಿಪನಡು ಸಮೀಪದ ಮಡ್ಯಲಚ್ಚಿಲ್‌ ನಿವಾಸಿ ಅಹ್ಮದ್ ಅಸೀರ್ (22) ಎಂದು ತಿಳಿದುಬಂದಿದೆ.

ಗುರುವಾರ ಸಂಜೆ ಅಸೀರ್ ತನ್ನ ಆಕ್ಟಿವಾ ಸ್ಕೂಟರಿನಲ್ಲಿ ಸಜಿಪದಿಂದ ಬೇಂಕೆ ಕಡೆಗೆ ಸಂಚರಿಸುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಅಸೀ‌ರ್ ಅವರನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಸೀ‌ರ್ ಅವರು ತಂದೆ, ತಾಯಿ, ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!