Monday, July 27, 2026
spot_imgspot_img
spot_imgspot_img

ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಶಾಲಾ ಬಸ್; 6 ಮಕ್ಕಳು ಮೃತ್ಯು, 20ಕ್ಕೂ ಅಧಿಕ ಮಂದಿ ಗಾಯ..!

- Advertisement -
- Advertisement -

ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಒಂದು ಉರುಳಿ ಬಿದ್ದ ಪರಿಣಾಮ ಆರು ಮಕ್ಕಳು ಮೃತಪಟ್ಟು 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಚಂಡೀಗಢ ಹರ್ಯಾಣಾದ ನರ್ನೌಲ್ ಎಂಬಲ್ಲಿ ನಡೆದಿದೆ.

ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಮರಕ್ಕೆ ಢಿಕ್ಕಿ ಹೊಡೆದಿದೆ. ಬಸ್ ಚಾಲಕ ಮದ್ಯದ ನಶೆಯಲ್ಲಿದ್ದಿರಬಹುದು ಎಂಬ ಶಂಕೆಯಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ. ಗಾಯಾಳು ವಿದ್ಯಾರ್ಥಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಈದ್-ಉಲ್-ಫಿತ್ ರಜೆ ಇದ್ದ ಹೊರತಾಗಿಯೂ ಶಾಲೆ ಕಾರ್ಯಾಚರಿಸುತ್ತಿತ್ತು ಎನ್ನಲಾಗಿದೆ. ಈ ಬಸ್‌ ಉನ್ಹಾನಿ ಗ್ರಾಮದ ಜಿ ಎಲ್ ಪಬ್ಲಿಕ್ ಸ್ಕೂಲ್‌ಗೆ ಸೇರಿದೆ. ಈ ಬಸ್‌ನ ಫಿಟ್ನೆಸ್‌ ಪ್ರಮಾಣಪತ್ರ ಆರು ವರ್ಷಗಳ ಹಿಂದೆ, 2018ರಲ್ಲಿ ಅವಧಿ ಮೀರಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!