Saturday, June 6, 2026
spot_imgspot_img
spot_imgspot_img

ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ

- Advertisement -
- Advertisement -

ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಮಡಿಕೇರಿ ಸಿದ್ದಾಪುರ ಸಮೀಪದ ಅತ್ತಿಮಂಗಲದಲ್ಲಿನಡೆದಿದೆ.

ಕಾಡಾನೆ ದಾಳಿಗೊಳಗಾದವರು ನೆಲ್ಯಹುದಿಕೇರಿಯ ಎಂ.ಜಿ.ಕಾಲನಿ ನಿವಾಸಿ ರಂಶಾದ್ ಎಂದು ತಿಳಿದು ಬಂದಿದೆ.

ಇವರು ಅರೆಕಾಡಿಗೆ ತೆರಳುತ್ತಿದ್ದ ಸಂದರ್ಭ ಅತ್ತಿಮಂಗಲ ತಲುಪುತ್ತಿದ್ದಂತೆ ಕಾಫಿ ತೋಟದಿಂದ ರಸ್ತೆಗೆ ಬಂದ ಕಾಡಾನೆ ಬೈಕಿನ ಮೇಲೆ ದಾಳಿ ಮಾಡಿದೆ ದಾಳಿಯಿಂದ ರಂಶಾದ್ ಹೊಟ್ಟೆ ಹಾಗೂ ಕಾಲಿಗೆ ಗಾಯವಾಗಿದ್ದು, ಸಹೋದರ ರಾಶಿದ್ ಓಡಿ ಪ್ರಾಣಪಾಯದಿಂದ ಪಾರಾಗಿದ್ದಾನೆ .
ಗಾಯಾಳನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!