Thursday, June 18, 2026
spot_imgspot_img
spot_imgspot_img

ವೈದ್ಯರ ನಿರ್ಲಕ್ಷ್ಯ; ತೀವ್ರ ರಕ್ತಸ್ರಾವದಿಂದ ಬಾಣಂತಿ ಸಾವು..!

- Advertisement -
- Advertisement -

ವೈದ್ಯರ ನಿರ್ಲಕ್ಷಕ್ಕೆ ಬಾಣಂತಿಯೊಬ್ಬಳು ಬಲಿಯಾದ ಘಟನೆ ಬೆಂಗಳೂರಿನಲಲ್ಲಿ ನಡೆದಿದೆ.

ಮೃತಪಟ್ಟ ಬಾಣಂತಿ ಆನೇಕಲ್ ಪಟ್ಟಣದ ನಿವಾಸಿ ಕವಿತಾ ಎಂದು ಗುರುತಿಸಲಾಗಿದೆ.

ಇದೇ ತಿಂಗಳ 13ನೇ ತಾರೀಕು ಹೆರಿಗೆ ನೋವು ಕಾಣಿಸಿಕೊಂಡು ಕವಿತಾ ಇಲ್ಲಿನ ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಸ್ವಾಭಾವಿಕ ಹೆರಿಗೆ ಸಾಧ್ಯವಾಗದ ಕಾರಣ ಆಪರೇಷನ್ ಮಾಡಿ ಕವಿತಾಗೆ ಹೆರಿಗೆ ಮಾಡಲಾಗಿದೆ. ಈ ವೇಳೆ ಅತಿಯಾದ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾರೆ.

ಕವಿತಾ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಆಕೆಯ ಸಂಬಂಧಿಕರು ಆನೇಕಲ್ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನೆಯವರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!