Wednesday, June 24, 2026
spot_imgspot_img
spot_imgspot_img

ಚೆನ್ನೈ ಮತ್ತು ಬೆಂಗಳೂರು ನಡುವಿನ ನೇರ ರೈಲು ಸಂಚಾರ ಇಂದಿನಿಂದ ಆರಂಭ!!

- Advertisement -
- Advertisement -

ಬೆಂಗಳೂರು: ಚೆನ್ನೈ ಮತ್ತು ಬೆಂಗಳೂರು ನಡುವಿನ ನೇರ ರೈಲು ಸಂಚಾರ ಇಂದಿನಿಂದ (ಅ.21) ಆರಂಭವಾಗಲಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ 6 ತಿಂಗಳಿನಿಂದ ರೈಲು ಸಂಚಾರ ರದ್ದುಗೊಂಡಿತ್ತು. ಡಬಲ್ ಡೆಕ್ಕರ್ ಸಂಪೂರ್ಣ ಕಾಯ್ದಿರಿಸಿದ ಸೀಟುಗಳನ್ನು ಹೊಂದಿರುವ ವಿಶೇಷ ರೈಲು ನಾಳೆಯಿಂದ ಸಂಚರಿಸಲಿದೆ.


ಚೆನ್ನೈ-ಬೆಂಗಳೂರು-ಚೆನ್ನೈ ನಡುವೆ ಸಂಚಾರ ನಡೆಸುವ ರೈಲು ನಂಬರ್ 06075 ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗೆ 7.25ಕ್ಕೆ ಹೊರಡಲಿದೆ. ಬೆಂಗಳೂರು ನಗರಕ್ಕೆ 1.10ಕ್ಕೆ ತಲುಪಲಿದೆ.


ರೈಲು ನಂಬರ್ 06076 ಬೆಂಗಳೂರು ನಗರದಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ರಾತ್ರಿ 8.30ಕ್ಕೆ ಚೆನ್ನೈ ತಲುಪಲಿದೆ. ಈ ರೈಲು 8 ಎಸಿ ಕೋಚ್‌ಗಳನ್ನು ಹೊಂದಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ಈ ರೈಲು ಕುಪ್ಪಂ, ಬಂಗಾರಪೇಟೆ, ಕೆ. ಆರ್. ಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

- Advertisement -

Related news

error: Content is protected !!