- Advertisement -
- Advertisement -




ವಿಟ್ಲ : ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ವಿಟ್ಲ ಕಸಬ ಗ್ರಾಮದ ವಿಟ್ಲ M R ನಾಯಕ್ ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಅಮ್ಮುಂಜೆ ಗ್ರಾಮ ಬಂಟ್ವಾಳ ನಿವಾಸಿ ಇಕ್ಬಾಲ್ ಅಹಮ್ಮದ್ (46) ಎಂಬವರ ದೂರಿನಂತೆ, ದಿನಾಂಕ:11-05-2024 ರಂದು ಬೆಳಿಗ್ಗೆ, ಳಿ, KA-19-HC-3982 ಸ್ಕೂಟರ್ ನ್ನು ಅದರ ಸವಾರೆ ರಾಜೇಶ್ವರಿ ಎಂಬವರು ಅಜಾಗರೂಕತೆ ಮತ್ತು ದುಡುಕುತನದಿಂದ ಚಲಾಯಿಸಿದ ಪರಿಣಾಮ, KA-19-HM-7034ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಸವಾರರಿಬ್ಬರು ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇಕ್ಬಾಲ್ ಅಹಮ್ಮದ್ ಹಾಗೂ ಸಾರ್ವಜನಿಕರು ಸವಾರರಿಬ್ಬರನ್ನು ಉಪಚರಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 85/2024, ಕಲಂ: 279,337 ಬಾಧಂಸಂ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -