- Advertisement -
- Advertisement -





ಕಾಸರಗೋಡು: ಬೈಕ್‌ಗಳ ನಡುವೆ ಅಪಘಾತ ಉಂಟಾದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಕಾಸರಗೋಡು ಚಟ್ಟಂಚಾಲ್ ನಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿ ತೆಕ್ಕಿಲ್ ಬೆಂಡಿ ಚ್ಚಾಲ್ ನ ಮುಹಮ್ಮದ್ ತಸ್ಲೀಮ್ (20) ಎಂದು ಗುರುತಿಸಲಾಗಿದೆ.
ಚಟ್ಟಂಚಾಲ್ ಸಬ್ ಟ್ರೆಜರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಬೈಕ್‌ಗಳ ನಡುವೆ ಅಪಘಾತ ಉಂಟಾಗಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ತಸ್ಲೀಮ್ ಮಂಗಳೂರಿನ ಕಾಲೇಜೊಂದರ ವೈದ್ಯಕೀಯ ವಿದ್ಯಾರ್ಥಿಯಾಗಿದ್ದನು. ಈ ಬಗ್ಗೆ ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -