Friday, June 5, 2026
spot_imgspot_img
spot_imgspot_img

ಮಣಿಪಾಲ: ಹೆಚ್ಚಿನ ಲಾಭದ ಆಸೆಗೆ ಲಕ್ಷಾಂತರ ರೂ.ಕಳೆದುಕೊಂಡ ವೈದ್ಯ..!

- Advertisement -
- Advertisement -

ಮಣಿಪಾಲ: ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಹೆಚ್ಚಿನ ಲಾಭಾ ಪಡೆಯಲು ಹಣ ತೊಡಗಿಸಿಕೊಂಡಿದ್ದ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.

ವಂಚನೆಗೊಳಗಾದ ವ್ಯಕ್ತಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಕುನಾಲ್ ದಾಸ್(29) ಎಂದು ಗುರುತಿಸಲಾಗಿದೆ.

ವೈದ್ಯ ಡಾ.ಕುನಾಲ್ ದಾಸ್ ಎಂಬವರಿಗೆ ಮೇ 17ರಂದು ಹೆಚ್ಚಿನ ಹಣವನ್ನು ಗೆಲ್ಲಲು ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಗ್ರೂಪ್‌ಗೆ ಸೇರುವಂತೆ ವಾಟ್ಸಾಪ್ ಸಂದೇಶ ಬಂದಿದ್ದು, ಅದರಂತೆ ಇವರು ಹೆಚ್ಚಿನ ಲಾಭಕ್ಕಾಗಿ ಈ ಗ್ರೂಪ್‌ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. ಹೀಗೆ ಹಂತಹಂತವಾಗಿ ಅಪರಿಚಿತ ವ್ಯಕ್ತಿಯ ಖಾತೆಗೆ ಒಟ್ಟು 1.79ಲಕ್ಷ ರೂ. ಹಣವನ್ನು ಹಾಕಿ ಮೋಸಕ್ಕೆ ಒಳಗಾಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!