Sunday, June 29, 2025
spot_imgspot_img
spot_imgspot_img

ಎಕ್ಸಿಟ್ ಪೋಲ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚಿನ ಸ್ಥಾನ : ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲವು ನಿಶ್ಚಿತ

- Advertisement -
- Advertisement -

ಲೋಕಸಭೆ ಚುನಾವಣೆಯ 7 ಹಂತಗಳ ಮತದಾನ ಮುಕ್ತಾಯವಾಗಿದ್ದು, ಬಹುತೇಕ ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚಿನ ಸ್ಥಾನ ದೊರೆಯಲಿವೆ ಎಂದು ಭವಿಷ್ಯ ನುಡಿದಿವೆ.

ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶದ ಇಣುಕು ನೋಟವನ್ನು ಮತಗಟ್ಟೆ ಸಮೀಕ್ಷೆಗಳು ಕೊಟ್ಟಿವೆ. ಈ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿಯೇ ನಿಚ್ಚಳ ಮೇಲುಗೈ ಸಾಧಿಸಬಹುದು. ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಆಗಬಹುದು ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಜೆಡಿಎಸ್‌ ಅಭ್ಯರ್ಥಿಗಳು ಈ ಬಾರಿಯೂ ಗೆಲ್ಲಬಹುದು ಎನ್ನುವ ಮುನ್ಸೂಚನೆ ಸಿಕ್ಕಿದೆ. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಕ್ಸಿಟ್​​ಪೋಲ್ ಸಮೀಕ್ಷೆಗಳು ತಿಳಿಸಿವೆ.

ಐದೂ ಗ್ಯಾರೆಂಟಿಗಳ ಅನುಷ್ಠಾನವನ್ನು ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸಿ ಮತ ಸೆಳೆಯಲು ಕಾಂಗ್ರೆಸ್ ನಾಯಕರು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಕಾಂಗ್ರೆಸ್‌ ಆಡಳಿತವಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಂಥ ಪ್ರಭಾವಿ ನಾಯಕರಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ ಎನ್ನುವ ಮುನ್ಸೂಚನೆಯನ್ನೂ ಮತಗಟ್ಟೆ ಸಮೀಕ್ಷೆಗಳು ನೀಡಿವೆ. ‘ಕರ್ನಾಟಕಕ್ಕೆ ಸಿದ್ದರಾಮಯ್ಯ, ಭಾರತಕ್ಕೆ ನರೇಂದ್ರ ಮೋದಿ’ ಎಂದು ಹಲವು ಮತದಾರರು ಈ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಹೇಳುತ್ತಿದ್ದರು. ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲವು ಸಾಧಿಸಲಿದ್ದಾರೆ ಎಂಬ ಸೂಚನೆ ದೊರಕಿದೆ.

ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಇಂತಿದೆ:
ಇಂಡಿಯಾ ನ್ಯೂಸ್- ಡಿ ಡೈನಾಮಿಕ್ಸ್ ಪ್ರಕಾರ:
ಎನ್‌ಡಿಎ-371
INDIA-125
ಇತರೆ-47

Jan Ki Baat
ಎನ್‌ಡಿಎ-362-392
INDIA Bloc-141-161

Republic Bharat-P Marq:
ಎನ್‌ಡಿಎ -359
INDIA-154
ಇತರೆ-30

Newsnation:
ಎನ್‌ಡಿಎ: 342-378
India: 153-169
ಇತರೆ- 21-23

TV5 ತೆಲುಗು
ಎನ್‌ಡಿಎ-359
INDIA-154
ಇತರೆ- 30

Republic Bharat-Matrize
ಎನ್‌ಡಿಎ-353-368
INDIA-118-133
ಇತರೆ-43-48

- Advertisement -

Related news

error: Content is protected !!