Thursday, March 28, 2024
spot_imgspot_img
spot_imgspot_img

ಇನ್ಮುಂದೆ ರೈಲ್ವೇ ನಿಲ್ದಾಣಗಳಲ್ಲಿ ಮಣ್ಣಿನ ಲೋಟದಲ್ಲಿ ಸಿಗಲಿದೆ ಚಹಾ!!

- Advertisement -G L Acharya panikkar
- Advertisement -

ಜೈಪುರ: ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಕಪ್‌ಗಳ ಬದಲಿಗೆ ಚಹಾವನ್ನು ಪರಿಸರ ಸ್ನೇಹಿ ‘ಕುಲ್ಹಾದ್’ (ಮಣ್ಣಿನ ಕಪ್) ನಲ್ಲಿ ಮಾರಾಟ ಮಾಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ದೇಶದ ಸುಮಾರು 400 ರೈಲ್ವೆ ನಿಲ್ದಾಣಗಳಲ್ಲಿ ಚಹಾವನ್ನು ‘ಕುಲ್ಹಾದ್’ನಲ್ಲಿ ನೀಡಲಾಗಿದೆ ಮತ್ತು ಭವಿಷ್ಯದಲ್ಲಿ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಚಹಾವನ್ನು ಕುಲ್ಹಾದ್ ಗಳಲ್ಲಿ ಮಾತ್ರ ಮಾರಾಟ ಮಾಡಲಾಗುವುದು ಎಂಬುದು ನಮ್ಮ ಯೋಜನೆಯಾಗಿದೆ.

ಇದು ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ರೈಲ್ವೆಯ ಇಲಾಖೆಯ ಕೊಡುಗೆಯಾಗಿರುತ್ತದೆ. ಅಲ್ಲದೆ ಕುಲ್ಹಾಡ್‌ಗಳು ಪರಿಸರವನ್ನು ಉಳಿಸುತ್ತವೆ ಮತ್ತು ಲಕ್ಷಾಂತರ ಜನರು ಇದರಿಂದ ಉದ್ಯೋಗ ಪಡೆಯಬಹುದು ಎಂದಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಧಿಗವಾರ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕುರಿತು ಹೇಳಿದ್ದಾರೆ.

- Advertisement -

Related news

error: Content is protected !!