- Advertisement -
- Advertisement -


ಸುಳ್ಯ: ಮಹಿಳೆಯೋರ್ವರಿಗೆ ಹಾವು ಕಚ್ಚಿ ಮೃತಪಟ್ಟ ಘಟನೆ ಸುಳ್ಯ ಇಲ್ಲಿನ ಬೆಳ್ಳಾರೆ ಸಮೀಪದ ಬೂಡು ಎಮಬಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಬೂಡು ಚೋಮ ಎಂಬವರ ಪತ್ನಿ ಸುಶೀಲ ಎಂದು ಗುರುತಿಸಲಾಗಿದೆ.
ಸುಶೀಲ ಎಂಬವರು ನೆಟ್ಟಾರಿನ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾಗ ಸಂಜೆ ಹಾವು ಕಚ್ಚಿದ್ದು ಅವರನ್ನು ತಕ್ಷಣ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
- Advertisement -