

ಬಂಟ್ವಾಳ: ಕಲ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧೀನದ ಮುನೀರುಲ್ ಇಸ್ಲಾಂ ಮದ್ರಸದ ವತಿಯಿಂದ ಬುಧವಾರ ಸಮಸ್ತ ಸ್ಥಾಪನಾ ದಿನ ಆಚರಿಸಲಾಯಿತು.

ಮದರಸ ಮುಖ್ಯ ಶಿಕ್ಷಕ ಅಬ್ದುಲ್ ಲತೀಫ್ ದಾರಿಮಿ ಮಾತನಾಡಿ, ಪುಣ್ಯ ಪುರುಷರ ತ್ಯಾಗೋಜ್ವಲ ಬದುಕಿನ ಜೀವನವನ್ನು ಭಾವಿ ಜನಾಂಗಕ್ಕೆ ಪರಿಚಯಿಸುವುದು ನಮ್ಮ ಕರ್ತವ್ಯವಾಗಿದೆ ಎಂದ ಅವರು ಸಮಸ್ತ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು.
ಮಸೀದಿ ಖತೀಬ್ ಕೆ.ಎಸ್.ಉಸ್ಮಾನ್ ದಾರಿಮಿ ಧ್ವಜಾರೋಹಣಗೈದರು. ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್. ಜತೆ ಕಾರ್ಯದರ್ಶಿ ಸಾಧಿಕ್ ಕಲ್ಲಡ್ಕ, ಸದಸ್ಯರಾದ ಅಬೂಬಕ್ಕರ್ ಮುರಬೈಲ್, ಅಬ್ದುಲ್ಲ ಕೋಡಿ, ಮುಅಝಿನ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಮುಅಲ್ಲಿಮ್ ಗಳಾದ ಮಜೀದ್ ಯಾಮಾನಿ, ಕಾಸಿಂ ಯಮಾನಿ, ಅಬ್ದುರಾಹ್ಮನ್ ದಾರಿಮಿ, ಹಿರಿಯರಾದ ಮೋನುಂಙಿ ಕಲ್ಲಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಸಮಸ್ತ ಪ್ಲಾಗ್ ಚಿತ್ರಕಲಾ ಸ್ಪರ್ಧೆಯ 1 ಮತ್ತು 2 ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮುಹಮ್ಮದ್ ಶಹೀಮ್, ಫಾತಿಮಾ ನಿಹ್ಮತ್, 3 ಮತ್ತು 4 ನೇ ತರಗತಿಯ ಮುಹಮ್ಮದ್ ಅಶ್ಹರ್ ಹಾಗೂ ಶಹೀರ, ಸೀನಿಯರ್ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮುಹಮ್ಮದ್ ಸಾಝಿಲ್, ಮುಹಮ್ಮದ್ ನುಹ್ಮಾನ್, ಶಿಝ ಹಾಗೂ ಹಾಜರಾ ರೀಹಾ ಇವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು.