Saturday, June 28, 2025
spot_imgspot_img
spot_imgspot_img

ನದಿಯಲ್ಲಿ ಮುಳುಗಿದ ಮಿಲಿಟರಿ ಟ್ಯಾಂಕ್‌; ನೀರಿನಲ್ಲಿ ಕೊಚ್ಚಿ ಹೋಗಿ ಐವರು ಯೋಧರು ಹುತಾತ್ಮ..!

- Advertisement -
- Advertisement -

ಲೇಹ್: ಲೇಹ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದ ಸಮೀಪವಿರುವ ವಾಸ್ತವಿಕ ನಿಯಂತ್ರಣ ರೇಖೆ ಪಕ್ಕದಲ್ಲಿ ಹರಿಯುತ್ತಿರುವ ನದಿ ದಾಟುತ್ತಿರುವಾಗ ಟ್ಯಾಂಕ್ ಒಂದು ಅಪಘಾತಕ್ಕೀಡಾಗಿ ಐವರು ಯೋಧರು ಹುತಾತ್ಮರಾದ ಘಟನೆ ನಡೆದಿದೆ.

ನೀರುಪಾಲಾದವರಲ್ಲಿ ಓರ್ವ ಜೂನಿಯರ್ ಕಮಿಷನ್ಡ್ ಅಧಿಕಾರಿ ಕೂಡ ಇದ್ದಾರೆ. ಇಂದು ಮುಂಜಾನೆ ಸುಮಾರು 1 ಗಂಟೆ ವೇಳೆ ಈ ದುರ್ಘಟನೆ ನಡೆದಿದೆ. ಸೈನಿಕರು ತರಬೇತಿ ಭಾಗವಾಗಿ ಮಂದಿರ್ ಮೋರ್ಹ್ ಸಮೀಪ ಬೋಧಿ ನದಿಯನ್ನು ತಮ್ಮ T-72 ಟ್ಯಾಂಕ್‌ನಲ್ಲಿ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಏರಲು ಪ್ರಾರಂಭಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಪಘಾತ ನಡೆದ ಸ್ಥಳ ಲೇಹ್‌ನಿಂದ 148 ಕಿಮೀ ದೂರದಲ್ಲಿದೆ.

ಐದು ಮಂದಿ ಸೈನಿಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು ಓರ್ವ ಸೈನಿಕನ ಮೃತದೇಹ ಪತ್ತೆಯಾಗಿದೆ. ಉಳಿದ ನಾಲ್ಕು ಮಂದಿಗಾಗಿ ಶೋಧ ಮುಂದುವರಿದಿದೆ.

- Advertisement -

Related news

error: Content is protected !!