Monday, June 30, 2025
spot_imgspot_img
spot_imgspot_img

ಐಪಿಎಲ್ 2020 ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಪ್ರಕಟ

- Advertisement -
- Advertisement -

ದುಬೈ (ಅ.26): ಈ ಬಾರಿಯ ಐಪಿಎಲ್‌ನ ಲೀಗ್‌ ಹಂತದಲ್ಲಿ ಕೇವಲ 10 ಪಂದ್ಯಗಳಷ್ಟೇ ಬಾಕಿಯಿದೆ. ಹಾಗಾಗಿ ಪ್ಲೇಆಫ್ ಹಂತಕ್ಕೇರುವ ಲೆಕ್ಕಾಚಾರ ಎಲ್ಲಾ ತಂಡಗಳಲ್ಲೂ ನಡೆಯುತ್ತಿದೆ.

ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳು ನವೆಂಬರ್ 5 ರಿಂದ 10ರವರೆಗೆ ನಡೆಯಲಿದೆ. ಕ್ವಾಲಿಫೈಯರ್ 1 ನವೆಂಬರ್ 5 ರಂದು ದುಬೈನಲ್ಲಿ ನಡೆಯಲಿದೆ. ನ.6ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ನ.2ರಂದು ಅಬುಧಾಬಿಯಲ್ಲಿ ಕ್ವಾಲಿಫೈಯರ್ 2 ನಡೆಯಲಿದೆ. ಫೈನಲ್ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನವೆಂಬರ್ 10 ರಂದು ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.


ಯಾವುದೇ ತಂಡಗಳು ಅಧಿಕೃತವಾಗಿ ಪ್ಲೇಆಫ್ ಹಂತಕ್ಕೆ ಇನ್ನೂ ಪ್ರವೇಶ ಪಡೆದುಕೊಂಡಿಲ್ಲ. ಆದರೆ ಮೊದಲ ಮೂರು ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳು ಇದ್ದು ತಮ್ಮ ಟಿಕೆಟನ್ನು ಬಹುತೇಕ ಕಾಯ್ದಿರಿಸಿಕೊಂಡಿದೆ.ಇದೇ ವೇಳೆ, ಬಿಸಿಸಿಐ ವಿಮೆನ್ಸ್ ಚಾಲೆಂಜರ್ ಟೂರ್ನಿಯ ವೇಳಾಪಟ್ಟಿಯನ್ನೂ ಬಿಡುಗಡೆಗೊಳಿಸಿದೆ.

ಮೊದಲ ಪಂದ್ಯ ಸೂಪರ್ನೋವಾಸ್ ಹಾಗೂ ವೆಲಾಸಿಟಿ ನಡುವೆ ನವೆಂಬರ್ 4 ರಂದು ನಡೆಯಲಿದೆ. ಎರಡನೇ ಪಂದ್ಯ ವೆಲಾಸಿಟಿ – ಟ್ರೈಲ್‌ಬ್ಲೇಜರ್ಸ್ ನಡುವೆ ನವೆಂಬರ್ 5 ರಂದು, ಮೂರನೇ ಪಂದ್ಯ ಟ್ರೈಲ್‌ಬ್ಲೇಜರ್ಸ್ – ಸೂಪರ್ನೋವಾಸ್ ನಡುವೆ ನವೆಂಬರ್ 7 ರಂದು ನಡೆಯಲಿದೆ. ಫೈನಲ್ ಪಂದ್ಯ ನವೆಂಬರ್ 9 ಸೇರಿ ಎಲ್ಲ ಪಂದ್ಯಗಳು ಸಂಜೆ 7: 30 ಕ್ಕೆ ಶಾರ್ಜಾದಲ್ಲಿ ನಡೆಯಲಿವೆ.

- Advertisement -

Related news

error: Content is protected !!