Monday, June 30, 2025
spot_imgspot_img
spot_imgspot_img

ಇಂದು ಭಾರತ ಅಮೆರಿಕ ನಡುವಿನ 2 ಪ್ಲಸ್ 2 ಮಹತ್ವದ ಸಭೆ

- Advertisement -
- Advertisement -

ನವದೆಹಲಿ(ಅ.26): ಭಾರತ ಅಮೆರಿಕ ನಡುವಿನ ಮಹತ್ವದ 2 ಪ್ಲಸ್ 2 ಮಹತ್ವದ ಸಭೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಭಾರತವನ್ನು ಮಾತುಕತೆಯಲ್ಲಿ ಪ್ರತಿನಿಧಿಸಲಿದ್ದಾರೆ.

ಜಾಗತಿಕ ಭಯೋತ್ಪಾದನೆ ನಿರ್ಮೂಲನೆ, ಮಾದಕ ದ್ರವ್ಯ ಸಾಗಾಟಕ್ಕೆ ತಡೆ ಮತ್ತು ಕೊರೋನಾ ಮಹಾಮಾರಿಯ ನಿಯಂತ್ರಣಕ್ಕೆ ಇನ್ನಷ್ಟು ಪರಿಣಾಮಕಾರಿ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಮೆರಿಕದ ವಿದೇಶಾಂಗ ಸಚಿವ ಮೈಕಲ್ ಪೊಂಪೈ ಮತ್ತು ರಕ್ಷಣಾ ಸಚಿವ ಮಾರ್ಕ್ ಎಸ್ಪೆರ್ ಅಮೆರಿಕವನ್ನು ಪ್ರತಿನಿಧಿಸಲಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಇದು ಸಾಕ್ಷಿಯಾಗಿದೆ. ಅಮೆರಿಕ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಜತೆ ಈ ರೀತಿಯ ಅತ್ಯುನ್ನತ ಮಾತುಕತೆ ನಡೆಸುತ್ತಿದೆ.ಚೀನಾದ ಜತೆ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಭಾರತ ಅಮೆರಿಕದ ಜತೆ ನಡೆಸುತ್ತಿರುವ ಈ ಮಾತುಕತೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಭಾರತ ವಿಶ್ವದ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಭಾರತಕ್ಕೆ ಆದ್ಯತೆ ನೀಡುತ್ತಿದೆ.

- Advertisement -

Related news

error: Content is protected !!