Monday, June 30, 2025
spot_imgspot_img
spot_imgspot_img

ಉಡುಪಿ : ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ಉಪ್ಪಿನಂಗಡಿ ಮೂಲದ ಮಹಿಳೆಯ ಬಂಧನ

- Advertisement -
- Advertisement -

ಉಡುಪಿ : ಉಡುಪಿಯಲ್ಲಿ ಗರುಡ ಗ್ಯಾಂಗ್ ಅಟ್ಟಹಾಸ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಬಂಧನವಾಗಿದೆ. ಹೆದ್ದಾರಿಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ ತೋರಿದ್ದಲ್ಲದೇ ಯುವಕನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಯುವತಿಯೊಬ್ಬಳನ್ನು ಉಡುಪಿ ಪೋಲಿಸರು ಬಂಧಿಸಿದ್ದಾರೆ.

ಆರೋಪಿ ಇಸಾಕ್ ಎಂಬ ಯುವಕನ ಗೆಳತಿ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಸಫರಾ ಎಚ್ ಅಲಿಯಾಸ್ ಸಾಜಿದಾ (21) ಬಂಧಿತ ಯುವತಿ.

ದ.ಕ ಜಿಲ್ಲೆ ಉಪ್ಪಿನಂಗಡಿ ಮೂಲದ ಸಫರಾ ಗ್ಯಾಂಗ್ ನ ಆರೋಪಿಗಳಿಗೆ ಆಶ್ರಯ ನೀಡಿದ್ದಲ್ಲದೇ ಹಣಕಾಸು ವ್ಯವಸ್ಥೆ ಮಾಡುತ್ತಿದ್ದಳು ಎನ್ನಲಾಗಿದೆ. ಬ್ಯಾಂಕ್ ಅಕೌಂಟ್ ಮೂಲಕ ಹಣ ರವಾನೆ ಮಾಡಿರುವ ವಿಚಾರದಲ್ಲಿ ಬಂಧಿಸಲಾಗಿದ್ದು, ಮೊಬೈಲ್ ಫೋನ್ ನೀಡಿ ತಲೆಮರೆಸಿಕೊಳ್ಳಲು ಸಫರಾ ಸಹಾಯ ಮಾಡಿದ್ದಾಳೆ ಎನ್ನಲಾಗಿದೆ.

ಉಡುಪಿ ನಗರ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿ ಸಫರಾ ಬಂಧಿಸಲಾಗಿದೆ ಎಂದು ಉಡುಪಿ ಎಸ್ ಪಿ ಡಾ. ಅರುಣ್ ಕುಮಾ‌ರ್ ಮಾಹಿತಿ ನೀಡಿದ್ದಾರೆ. ಸಫಾರ ಯಾನೆ ಸಾಜಿದ ರನ್ನು ಮಂಗಳೂರಿನ ಕಾರಾಗೃಹದಲ್ಲಿ ಇರಿಸಲಾಗಿದೆ.

- Advertisement -

Related news

error: Content is protected !!