Sunday, June 7, 2026
spot_imgspot_img
spot_imgspot_img

ಕೊಲೆ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನ ಸಿನಿಮಾ‌ ನಿರ್ದೇಶಕ ಅರೆಸ್ಟ್..!

- Advertisement -
- Advertisement -

ಬೆಂಗಳೂರು: ಕೊಲೆ ಕೇಸ್ ನಲ್ಲಿ 20 ವರ್ಷದಿಂದ ತಲೆ ಮರೆಸಿಕೊಂಡಿದ್ದ ಸಿನಿಮಾ‌ ನಿರ್ದೇಶಕನನ್ನ ಸಿಸಿಬಿ ಅರೆಸ್ಟ್ ಮಾಡಿದೆ. ಬಂಧಿತ ಆರೋಪಿ ಸ್ಯಾಂಡಲ್ ವುಡ್ ಸಿನಿ ನಿರ್ದೇಶಕ ಗಜೇಂದ್ರ @ ಗಜ ಎಂದು ತಿಳಿದು ಬಂದಿದೆ.

ಪೊಲೀಸರ ಕೈಗೆ ಸಿಗದೇ ಗಜೇಂದ್ರ ಒಡಾಡಿಕೊಂಡಿದ್ದ. 2004 ರಲ್ಲಿ ನಡೆದಿದ್ದ ವಿಲ್ಸನ್ ಗಾರ್ಡನ್ ನಲ್ಲಿ ರೌಡಿ ಶೀಟರ್ ಕೊತ್ತರವಿ ಮರ್ಡರ್ ಕೇಸ್ ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ಗಜೇಂದ್ರ A8 ಆಗಿದ್ದ. ಒಂದು ವರ್ಷ ಜೈಲು ಮುಗಿಸಿ ನಂತರ ಕೋರ್ಟ್ ಹಾಜರಾಗಿರಲಿಲಲ್ಲ.

ಈತ ಅರಸಯ್ಯನ ಶಿಷ್ಯ ಗಜೇಂದ್ರ, ಗಜ, ಪುಟಾಣಿ ಪವರ್, ರುದ್ರ ಸಿನಿಮಾ ಡೈರೆಕ್ಷನ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಗಜ ಹೇಳಿಕೊಂಡಿದ್ದ. ಸದ್ಯ ಸಿಸಿಬಿ ಪೊಲೀಸರು ಗಜೇಂದ್ರನನ್ನ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

- Advertisement -

Related news

error: Content is protected !!