



ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ಇಂದು ಬೆಳಿಗ್ಗೆ ಶಾಲಾ ವಾಹನವೊಂದು ಬ್ರೇಕ್ ಫೇಲ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಲಯನ್ಸ್ ಕ್ಲಬ್ ವಿಟ್ಲ ವಲಯ ಅಧ್ಯಕ್ಷ ಎರ್ಮೆನಿಲೆ ರಜಿತ್ ಆಳ್ವ ಅವರ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಬೆಳಿಗ್ಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಕುಂಟುಕುಡೇಲು ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ವಾಹನವು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿಯಾದ ಸಂದರ್ಭದಲ್ಲಿ ವಿದ್ಯುತ್ ಕೇಬಲ್ ಬಸ್ಗೆ ತಾಗಲು ಕೇವಲ 1 ಅಡಿ ಅಂತರ ಮಾತ್ರ ಬಾಕಿ ಇತ್ತು.ಈ ಅಪಾಯವನ್ನು ಕಂಡ ಸ್ಥಳೀಯ ನಿವಾಸಿ ಹಾಗೂ ಲಯನ್ಸ್ ಕ್ಲಬ್ ವಿಟ್ಲ ವಲಯ ಅಧ್ಯಕ್ಷರಾದ ರಜಿತ್ ಆಳ್ವ ಅವರು ತಕ್ಷಣವೇ ಓಡಿ ಬಂದು ವಿದ್ಯುತ್ ಲೈನ್ ಅನ್ನು ತಕ್ಷಣ ಆಫ್ ಮಾಡಿಸಿದರು.

ಅವರ ಈ ಕ್ಷಿಪ್ರ ಕಾರ್ಯದಿಂದ ಬಸ್ನಲ್ಲಿದ್ದ ಮಕ್ಕಳು ಮತ್ತು ಸಿಬ್ಬಂದಿಯ ಪ್ರಾಣ ರಕ್ಷಣೆಯಾಗಿದೆ. ಘಟನೆಯಲ್ಲಿ ಬಸ್ನಲ್ಲಿದ್ದವರಿಗೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು ರಜಿತ್ ಆಳ್ವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








